ಮಕ್ಕಳಿಗೆ ಹಿರಿಯರ ಮಾರ್ಗದರ್ಶನ ಸಿಗುತ್ತಿಲ್ಲ- ಲೋಕೇಶ್ ಕುಮಾರ್ ವಿಷಾದ

ಮೈಸೂರು: ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ನಾಣ್ಣುಡಿ ಆಧುನಿಕ ಜೀವನ ಶೈಲಿಯಿಂದ ಮರೆಯಾಗುತ್ತಿರುವುದರಿಂದ ಮಕ್ಕಳು ಯುವಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ ಲೋಕೇಶ್ ಕುಮಾರ್ ವಿಷಾದಿಸಿದರು.

ಕುವೆಂಪು ನಗರದ ಎಂ.ಬ್ಲಾಕ್ ನಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಹೊಸ ಸೀರೆ, ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದ ವೇಳೆ‌ ಲೋಕೇಶ್ ಕುಮಾರ್ (ಮಾದಾಪುರ)ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಹಾಗಾಗಿ ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ, ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ‌ ವ್ಯಕ್ತಪಡಿಸಿದರು.

ಹಿರಿಯರ ಬದುಕು ಅತಂತ್ರವಾಗಿ ವೃದ್ಧಾಶ್ರಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿದ್ದು,ಹಿರಿಯ ತಾಯಂದಿರನ್ನು ಹೆಚ್ಚು ಕಾಳಜಿ ವಹಿಸಿ ಆಶ್ರಯ ನೀಡಿ ಆರೈಕೆ ಮಾಡುತ್ತಿರುವ ಬೆಳಕು ವಾತ್ಸಲ್ಯದಾಮದ ಸೇವೆ ಅಪಾರ ಎಂದು ಲೋಕೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಶಿಂಷ ದಿನೇಶ್,ಮೋಹನ್ ಕುಮಾರ್,ಕಾಳೇಗೌಡ, ರಾಜಶೇಖರ್, ಹಿರಿಯ ಕ್ರೀಡಾಪಟು ಮಹಾದೇವ್, ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ದತ್ತ ಮತ್ತಿತರರು ಹಾಜರಿದ್ದರು.