ಬೆಳಗಾವಿ,ಚಿಕ್ಕೋಡಿಯಲ್ಲಿ 6 ಕೆಳ ಹಂತದ ಸೇತುವೆಗಳು ಮುಳುಗಡೆ

Spread the love

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರಿಸುತ್ತಿದ್ದು,
ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ.

ಕೃಷ್ಣಾ ನದಿಗೆ 54 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ.ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 6 ಕೆಳ ಹಂತದ ಸೇತುವೆಗಳು ಮತ್ತೆ ಮುಳುಗಡೆಯಾಗಿವೆ.

12 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 6 ಕೆಳ ಹಂತದ ಸೇತುವೆಗಳು,ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲ್ಲಿಕವಾಡ
-ದತ್ತವಾಡ.ವೇದಗಂಗಾ ನದಿಯ ಬಾರವಾಡ-ಕುನ್ನೂರು, ಭೋಜ್-ಕಾರದಗಾ, ಭೋಜವಾಡಿ – ಕುನ್ನೂರು.
ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು-ಕಲ್ಲೋಳ, ಬಾವನಸೌಂದತ್ತಿ – ಮಾಂಜರಿ ಸೇತುವೆಗಳು ಜಲಾವೃತವಾಗಿದ್ದು
ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಿರಿಸಬೇಕಾಗಿದೆ.