ಸೈಬರ್‌ ಕ್ರೈಂ ಬಗ್ಗೆ ಎಚ್ಚರದಿಂದಿರಿ – ಮಹೇಶ್

Spread the love

ಮೈಸೂರ್: ಅಜ್ಞಾನ, ನಿರ್ಲಕ್ಷ್ಯ ನಿಷ್ಕಾಳಜಿಯಿಂದ ಸೈಬರ್‌ ಕ್ರೈಂಗಳು ಹೆಚ್ಚುತ್ತಿವೆ ಈ ಬಗ್ಗೆ ಎಚ್ಚರದಿಂದಿರಿ ಎಂದು
ಮೈಸೂರು ಜಿಲ್ಲಾ ಸೈಬರ್ ಪೋಲಿಸ್ ಠಾಣೆಯ ತನಿಕಾ ಸಹಾಯಕ ಮಹೇಶ್ ಹೇಳಿದರು.

ಅಗ್ರಹಾರದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಸೈಬರ್ ಕ್ರೈಂ ಅಪರಾಧ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಸೈಬರ್‌ ಕ್ರೈಂಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ,ಈ ಕಾರ್ಯಾಗಾರ ಸೈಬರ್‌ ಕ್ರೈಂ ಅಪರಾಧ ಜಾಗೃತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು,ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್ ಕ್ರೈಮ್ ಇವುಗಳ ಬಗ್ಗೆ ಜಾಗೃತಿ ಹೊಂದುವುದು ಅತಿ ಅವಶ್ಯಕ ಎಂದು ಹೇಳಿದರು

ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂದು ವಿಷಾದಿಸಿದರು.

ಸರ್ಕಾರಿ ಸಂಸ್ಥೆಗಳಲ್ಲೂ ಸಹ ಪ್ರತೀ ಕೆಲಸದಲ್ಲಿಯೂ ಕಂಪ್ಯೂಟರ್, ವಾಟ್ಸಪ್, ಪೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ,ಆದ್ದರಿಂದ ಈ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ಮಹೇಶ್ ನುಡಿದರು.

ನಿವೃತ್ತ ಮಾಜಿ ಸೈನಿಕ
ನಂಜುಂಡಸ್ವಾಮಿ ಎಚ್ ಎಸ್, ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ಮಹಿಳಾ ಪ್ರಮುಖ ನಾಗಮಣಿ ,ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸುಬ್ಬಲಕ್ಷ್ಮಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಚಂದ್ರು ಸಿ, ಕಾರ್ಯದರ್ಶಿ ಜಯಕುಮಾರ್, ದರ್ಶನ್ ಮೂರ್ತಿ, ಮಹಾನ್ ಶ್ರೇಯಸ್, ಮತ್ತಿತರರು ಹಾಜರಿದ್ದರು.