ಬೆಂಗಳೂರು : ಕಿಲ್ಲರ್ ಬಿಬಿಎಂಪಿ ಕಸದ ಲಾರಿ ಹರಿದು ಹತ್ತು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದುವರೆಗೆ ಕಿಲ್ಲರ್ ಬಿಎಂಟಿಸಿ ಎಂದು ಹೇಳುತ್ತಿದ್ದೆವು.ಈಗ ಅದು ಕಿಲ್ಲರ್ ಬಿಬಿಎಂಪಿ ಕಸದ ಲಾರಿ ಎಂಬುದಾಗಿ ಬದಲಾಯಿಸು ವಂತಾಗಿದೆ.ಏಕೆಂದರೆ ಕಸದ ಲಾರಿಗೆ ಬೆಂಗಳೂರಿನಲ್ಲಿ ಬಲಿಯಾಗುವುದು ಮುಂದುವರಿದಿದೆ ಅದಕ್ಕೆ.
ನಗರದ ಥಣಿಸಂಧ್ರ ರೈಲ್ವೆ ಟ್ರ್ಯಾಕ್ ಸಮೀಪ ಈ ಘಟನೆ ನಡೆದಿದ್ದು,ಐಮಾನ್(10) ಮೃತ ಬಾಲಕ.
ಶನಿವಾರ ಮಧ್ಯಾಹ್ನ ಐಮಾನ್ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಬಿಬಿಎಂಪಿ ಲಾರಿ ಗುದ್ದಿದೆ.
ಬೆಂಗಳೂರಿನ ಹೆಗಡೆ ನಗರದಲ್ಲಿರುವ ಮದರಸಾದಲ್ಲಿ ಅಡ್ಮಿಷನ್ ಮಾಡಿಸಲು ಐಮಾನ್ ನನ್ನು ತಂದೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರು.
ಥಣಿಸಂದ್ರದ ರೈಲ್ವೆ ಟ್ರ್ಯಾಕ್ ಬಳಿ ಏಕಾಏಕಿ ಕಸದ ಲಾರಿ ಬೈಕ್ ಡಿಕ್ಕಿ ಹೊಡೆದಿದೆ.ತಂದೆ ಮಗ ಇಬ್ಬರು ಕೆಳಗೆ ಬಿದ್ದಿದ್ದು,ಬಾಲಕನ ಮೇಲೆಯೇ ಲಾರಿ ಹರಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನು ಕಂಡ ಕೂಡಲೇ ರೊಚ್ಚಿಗೆದ್ದ ಜನ ಕಸದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ಆರಿಸಿದರು.
ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.