ಬೆಂಗಳೂರು: ಬಾಬುಸಾ ಪಾಳ್ಯದ ಕಟ್ಟಡ ದುರಂತದ ಹಿನ್ನೆಲೆಯಲ್ಲಿ ಹೊರಮಾವು ಎಇ ವಿನಯ್ ಅವರನ್ನು ಅಮಾನತು ಮಾಡಲಾಗಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಎಇ ವಿನಯ್ ರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.
ಅಕ್ರಮ ಕಟ್ಟಡ ಎಂದು ಗೊತ್ತಿದ್ದರೂ ಅದನ್ನು ತೆರವು ಮಾಡಿಸದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ವಿನಯ್ ಸಸ್ಪೆಂಡ್ ಆಗಿದ್ದಾರೆ.
ಮಹದೇವಪುರ ವಲಯ ಆಯುಕ್ತರ ವರದಿ ಆಧರಿಸಿ ಬಿಬಿಎಂಪಿ ಕಮಿಷನರ್ ಈ ಆದೇಶ ಹೊರಡಿಸಿದ್ದಾರೆ.
