ಕೆರೆ ಒತ್ತುವರಿ ಮಾಡಿ ಲೇಔಟ್;ಹುಣಸೂರುಬಸವನಕಟ್ಟೆ ನುಂಗುತ್ತಿದ್ದಾರೆ ಪ್ರಭಾವಿಗಳು!

Spread the love

ಹುಣಸೂರು: ಪ್ರಭಾವಿ ವ್ಯಕ್ತಿಗಳು ನಗರ ಪ್ರದೇಶಗಳಲ್ಲಿ ಜನರ ಜೀವನಾಡಿಗಳಾಗಿದ್ದ ಕೆರೆಗಳನ್ನು ನುಂಗಿ ನೀರು ಕುಡಿದದ್ದಾಯಿತು ಇದೀಗ ಗ್ರಾಮಾಂತರ ಪ್ರದೇಶಗಳ ಸರದಿ!.

ಹುಣಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಕಾಲದಲ್ಲಿ ಸಮೃದ್ಧವಾಗಿದ್ದ ಬಹಳಷ್ಟು ಕೆರೆಗಳು ಈಗ ಮಾಯವಾಗಿದೆ.

ಇದೀಗ ಮತ್ತೊಂದು ಕೆರೆಯನ್ನು ಇನ್ನಿಲ್ಲದಂತೆ ಮಾಡಲು ಖಾಸಗಿ ವ್ಯಕ್ತಿಗಳು ಮುಂದಾಗಿದ್ದಾರೆ, ಇದಕ್ಕೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಣಸೂರು ತಾಲೂಕು ಹನಗೋಡು ಹೋಬಳಿ,ಉಮಾತ್ತೂರು ಗ್ರಾಮದ ಬಸವನಕಟ್ಟೆ ಕರೆ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕೆರೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಅವರು‌ ಆರೋಪಿಸಿದ್ದಾರೆ.

ಹನಗೋಡು ಹೋಬಳಿ,ಉಮತೂರು ಗ್ರಾಮ ಸರ್ವೆ ನಂಬರ್ 28 ಹಂಚ್ಯಾ ಹಾಗೂ 1ನೇ ಪಕ್ಷಿರಾಜ ಪುರದ ಮಧ್ಯದಲ್ಲಿ ಬರುವ ಬಸವನಕಟ್ಟೆ ಕೆರೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡುತ್ತಿದ್ದಾರೆ,ಹಾಗಾಗಿ ಕೆರೆ ಬಹುತೇಕ ನಾಶವಾಗುತ್ತಿದೆ.

ಎರಡುವರೆ ಎಕರೆ ವಿಶಾಲವಾದ ಬಸವನಕಟ್ಟೆ ಒತ್ತುರಿಯಾಗಿ ಈಗ ಅರ್ಧ ಎಕರೆಗೆ ಬಂದು ನಿಂತಿದೆ ಇನ್ನೇನು ನಿವೇಶನಗಳನ್ನು ಮಾಡಿ ಮನೆ ಲೇಔಟ್ ಮಾಡುವುದಷ್ಟೇ ಬಾಕಿ ಇದೆ.

ಬಸವನಕಟ್ಟೆ ಕೆರೆಯಿಂದ ಸುತ್ತಮುತ್ತಲ ಐದಾರು ಗ್ರಾಮಗಳ ಜಾನುವಾರುಗಳಿಗೆ ಕುಡಿಯಲು ನೀರು ಉಪಯೋಗಿಸಲಾಗುತ್ತಿತ್ತು. ಜೊತೆಗೆ ಅಡಿಕೆ ಬಾಳೆ, ತೆಂಗು ಮತ್ತಿತರ ಗಿಡ ಮರಗಳಿಗೂ ಇದೇ ಬಸವನ ಕಟ್ಟೆಯಿಂದ ನೀರನ್ನು ರೈತರು ಉಪಯೋಗಿಸುತ್ತಿದ್ದರು.

ನೀರಿರುವ ಕೆರೆಯನ್ನೇ ನುಂಗುತ್ತಿರುವ ಖಾಸಗಿ ವ್ಯಕ್ತಿಗಳ ಹಿಂದೆ ಯಾರಿದ್ದಾರೋ ತಿಳಿಯದು.ಲೇಔಟ್ ಮಡಲು, ನಿವೇಶನಗಳನ್ನು ಮಾಡಲು ಪರ್ಮಿಶನ್ ಕೊಟ್ಟವರು ಯಾರು?
ಪರ್ಮಿಷನ್ ಕೊಟ್ಟ ಅಧಿಕಾರಿಗೆ ಬಸವನಕಟ್ಟೆಯಿಂದ ಬಹಳಷ್ಟು ಗ್ರಾಮಗಳಿಗೆ ಉಪಯೋಗವಾಗುತ್ತದೆ ಎಂಬ ಸಣ್ಣ ಪರಿಜ್ಞಾನ ಇರಲಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಒಟ್ಟಾರೆ ಜನ ಜಾನುವಾರುಗಳಿಗೆ ಅಗತ್ಯವಾಗಿರುವ ಬಸವನ ಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡಲಾಗುತ್ತಿದ್ದು ಇನ್ನೇನು ಲೇಔಟ್ ಪ್ರಾರಂಭವಾಗಿಬಿಡುತ್ತದೆ,ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮೈಸೂರು ಜಿಲ್ಲಾಧಿಕಾರಿಗಳನ್ನು ಚೆಲುವರಾಜು ಒತ್ತಾಯಿಸಿದ್ದಾರೆ.

ಬಸವನ ಕಟ್ಟೆ ಕೆರೆ ಒತ್ತುವರಿ ಮಾಡಿ ನಿವೇಶನ ಮಾಡಲು ಮತ್ತು ಲೇಔಟ್ ಮಾಡಲು ಸಹಿ ಹಾಕಿ ಕೊಟ್ಟಿರುವ ಅಧಿಕಾರಿಗಳೆಲ್ಲರ ಮೇಲೂ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಚೆಲುವರಾಜು ಎಚ್ಚರಿಸಿದ್ದಾರೆ.

ಹೀಗೆ ಹುಣಸೂರಿನ ಎಲ್ಲ ಕರೆಗಳನ್ನು ನುಂಗುತ್ತಾ ಹೋದರೆ ಮುಂದೆ ಜನ ಜಾನುವಾರುಗಳು ಬದುಕುವುದು ಬೇಡವೇ ಮೂಕ ಪ್ರಾಣಿಗಳು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು ಎಂದು ಅವರು ಕಿಡಿ ಕಾರಿದ್ದಾರೆ.