ಮೈಸೂರು: ಅಗ್ರಹಾರ ವೃತ್ತದಲ್ಲಿರುವ ಶ್ರೀಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆ ಅ. 20ರಂದು ಹಾರ್ಡ್ವಿಕ್ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.
ಈ ಚುನಾವಣೆಗೆ ಹಾಲಿ ಉಪಾಧ್ಯಕ್ಷ ಡಿ ಬಸವರಾಜ್ ಬಸಪ್ಪ ಅವರು ಚುನಾವಣೆ ಅಧಿಕಾರಿ ಬಿ ರಾಜು ಅವರಿಗೆ ಇಂದು ನಾಮಪತ್ರ ಸಲ್ಲಿಸಿದರು.
ಈ ವೇಳೆ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷರಾದ ಪ್ರತಿಧ್ವನಿ ಪ್ರಸಾದ್, ಹಾಲಿ ನಿರ್ದೇಶಕರಾದ ನo ಸಿದ್ದಪ್ಪ, ಎಂಡಿ ಪಾರ್ಥಸಾರಥಿ, ಎಚ್‌ವಿ ಭಾಸ್ಕರ್, ನವೀನ್ ಕುಮಾರ್, ಎಂಎಸ್ ಅರುಣ್ ಸಿದ್ದಪ್ಪ, ಬಿ ನಾಗಜೋತಿ ಪ್ರತಿಧ್ವನಿ ಪ್ರಸಾದ್, ಜಿ ಎಂ ಪಂಚಾಕ್ಷರಿ, ಟಿ ವಿ ಗಣೇಶ್ ಮೂರ್ತಿ ತಾಯೂರು, ಶಿವಪ್ರಕಾಶ್ ಹೆಚ್, ಎಚ್ ಸರ್ವಮಂಗಳ, ರಾಣಿ ಬಸವರಾಜು, ನವೀನ್ ಕೆಂಪಿ, ಮಂಜಪ್ಪ, ತೀರ್ಥ ಕುಮಾರ್ ಮತ್ತಿತರರು ಹಾಜರಿದ್ದರು.