ಮೈಸೂರು: ಜೆಡಿಎಸ್ ಮೈಸೂರಿನ ಮುಖಂಡರು ಬಸವೇಶ್ವರ ಜಯಂತಿ ಆಚರಿಸಿದರು.
ಮೈಸೂರಿನ ಗನ್ ಹೌಸ್ ಸಮೀಪ ಇರುವ ಬಸವೇಶ್ವರ ಪುತ್ತಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಮಾಲಾರ್ಪಣೆ ಮಾಡುವ ಮೂಲಕ ಬಸವಣ್ಣನವರ ಸ್ಮರಣೆ ಮಾಡಲಾಯಿತು.
ಈ ವೇಳೆ ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಅಧ್ಯಕ್ಷ ಕೆ. ಟಿ.ಚೆಲುವೇಗೌಡ ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಮೈಸೂರು ನಗರ ಹಿರಿಯ ಉಪಾಧ್ಯಕ್ಷರಾದ ಫಾಲ್ಕನ್ ಬೋರೇಗೌಡ, ಚಾಮರಾಜ ಕ್ಷೇತ್ರದ ಅಧ್ಯಕ್ಷ ಪಿ,ಮಂಜುನಾಥ್ ಮತ್ತಿತರರು ಬಸವಣ್ಣನವರ ಪುತ್ಥಳಿಗೆ ನಮಸ್ಕರಿಸಿದರು. ಉಪಸ್ಥಿತರಿದ್ದರು.