ಬಸವಯೋಗ ಆಶ್ರಮದಲ್ಲಿ ನಾಳೆಗುರು ವಂದನೆ ಕಾರ್ಯಕ್ರಮ

ಬೆಂಗಳೂರು: ಬೆಂಗಳೂರಿನ ಲಕ್ಷ್ಮೀಪುರ, ಮಾದನಾಯಕನಹಳ್ಳಿ ಸಮೀಪ
ಬಸವಯೋಗ ಆಶ್ರಮದಲ್ಲಿ
ಶರಣೆ ಅಕ್ಕಮಹಾದೇವಿಯವರಿಗೆ ಗುರು ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಳೆ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿರುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸಲಿದ್ದಾರೆ‌

ಮೊದಲಿಗೆ ಬಸವ ಗುರು ಪೂಜೆ,
ಗುರು ವಂದನೆ, ಧ್ಯಾನ,
ವಚನ ನಮನ, ವಚನ ಮಂಥನ,
ಪ್ರವಚನ ಮತ್ತಿತರ ಕಾರ್ಯಕ್ರಮವೂ ಇರಲಿದೆ

ಸರ್ವರಿಗೂ ಸ್ವಾಗತವಿದ್ದು ಹೆಚ್ಚಿನ ಮಾಹಿತಿಗೆ ಮೊಬೈಲ್ 99806 08782 ರಲ್ಲಿ ಸಂಪರ್ಕಿಸಬಹುದು.