ಮೈಸೂರು, ಏ.6: ಮೈಸೂರಿನ ಚಾಮುಂಡಿಪುರಂ ಬಸವ ಬಳಗ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ಅವತರಿಸಿದ ಪುಣ್ಯ ದಿನವಾದ ಇಂದು ಶ್ರೀ ರಾಮನವಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ನಂತರ ಬಸವ ಬಳಗ ಪದಾಧಿಕಾರಿಗಳು ಸೇರಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಸಿ ಸಂದೀಪ್ ಅವರು ಮಾತನಾಡಿ, ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ ಎಂದು ಹೇಳಿದರು.
ಪ್ರಭುವಿನ ಅನುಗ್ರಹದಿಂದ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಮಾಡಲಿ, ಶ್ರೀ ರಾಮನ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ಬಿಸಿಲಿನ ತಾಪಮಾನ ಆದಷ್ಟು ಬೇಗ ನಿವಾರಣೆಯಾಗಲಿ ಎಂದು ಆಶಿಸಿದರು.

ಶ್ರೀ ರಾಮನವಮಿ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ರಾಮಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಝೋನ್ 3ರ ಕಂದಾಯಾಧಿಕಾರಿ ಬಸವಣ್ಣ, ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸ್ಸಪ್ಪ, ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಉಪಾಧ್ಯಕ್ಷ ಎಂ ಬಸವರಾಜು, ಖಜಾಂಜಿ ವಿ ಬಸವರಾಜು,ನಿರ್ದೇಶಕರಾದ ಬಸವರಾಜು, ಮಂಜುಳ , ಪ್ರಭು ಎ.ಸಿ, ಧರ್ಮೇಂದ್ರ ಎನ್, ಯೋಗೇಶ್, ಸೋಮೇಶ್ ಮುಖಂಡರಾದ ಚಂದ್ರಶೇಖರ್, ಮೋಹನ್, ಸುರೇಶ್, ರಾಜೇಂದ್ರ, ಮಹೇಶ್ ಅರಸ್, ಅಡುಗೆ ಕಾಂಟ್ರಾಕ್ಟರ್ ಕುಮಾರ್, ಸಂತೋಷ್, ರಾಮು, ಅರವಿಂದ್, ವಾಸು, ಶಿವಲಿಂಗ ಸ್ವಾಮಿ, ಸತೀಶ್, ವಿಕ್ರಾಂತ್ ರಾಜು, ಲಕ್ಷ್ಮಣ್, ಶಿವಮಲ್ಲಪ್ಪ, ಮಹೇಶ್, ದೀಪಕ್, ಶಿವರಾಜ್ , ಸುರೇಂದರ್, ಧನುಷ್ ಮುಂತಾದವರು ಪಾಲ್ಗೊಂಡಿದ್ದರು.