ಬೆಂಗಳೂರು: ದೊಡ್ಡಾಟ ಕಲಾವಿದ ಮಹೇಶ ಎಸ್ ತಳವಾರ ಅವರಿಗೆ ಬಸವ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಕನ್ನಡ ಜಾನಪದ ಪರಿಷತ್ ಶಾಂತಿ ನಗರ ವಿಧಾನ ಸಭಾ ಕ್ಷೇತ್ರ ಘಟಕದ ವತಿಯಿಂದ ನಡೆದ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಎಸ್ ಕೆ ಕರೀಂ ಖಾನ್ ಮತ್ತು ಬಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೊಡ್ಡಾಟ ಯುವ ಕಲಾವಿದ,ಜಾನಪದ ಕಲಾವಿದ,ನಾಟಕಕಾರ ಮತ್ತು ಯುವ ಬರಹಗಾರರಾದ ಮಹೇಶ ಎಸ್ ತಳವಾರ ಅವರಿಗೆ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಮಾರು 30ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಜನಪದ ಡಾ.ಎಸ್ ಬಾಲಾಜಿ,ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾ.ರಿಯಾಜ್ ಪಾಷಾ, ಅಂತರಾಷ್ಟ್ರೀಯ ಜಾನಪದ ಗಾಯಕರಾದ ಡಾ.ಅಪ್ಪುಗೆರೆ ತಿಮ್ಮರಾಜು,ವಾಣಿಜ್ಯ ತೆರಿಗೆ ಉಪ ಆಯುಕ್ತರಾದ ಮೊಹಮ್ಮದ್ ರಫೀಕ್ ಪಾಷಾ, ಎಸ್ ಕೆ ಕರೀಂಖಾನ್ ರ ಪುತ್ರ ತನ್ವಿರ್ ಅಹ್ಮದ್, ಭಾರತ ಸಾರಥಿ ಪತ್ರಿಕೆ ಸಂಪಾದಕಾರಾದ ಗಂಡಸಿ ಸದಾನಂದ ಸ್ವಾಮಿ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಕ.ಜಾ.ಪ ಅಧ್ಯಕ್ಷರಾದ ಡಾ.ಎನ್ ಆರ್ ಮಂಜುನಾಥ ಮತ್ತಿತ್ತರರು ಉಪಸ್ಥಿತರಿದ್ದರು.