ಬ್ಯಾಂಕಿಗೆ ಕಟ್ಟ ಬೇಕಿದ್ದ ಹಣದೊಂದಿಗೆ ನಾಪತ್ತೆಯಾದ ಬಾರ್ ಕ್ಯಾಶಿಯರ್

Spread the love

ಮೈಸೂರು: ಬ್ಯಾಂಕಿಗೆ ಕಟ್ಟಲು ಹೇಳಿದ್ದ ಹಣದೊಂದಿಗೆ ಬಾರ್‌ ಕ್ಯಾಶಿಯರ್ ನಾಪತ್ತೆಯಾದ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಈ‌ ಬಗ್ಗೆ ಗಾಜನೂರು ಗ್ರಾಮದ ಮಹದೇವ್ ಎಂಬಾತನ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ತಿಂಗಳಿಂದ ಮಹದೇವ್ ನಂಜನಗೂಡು ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿರುವ ಎಸ್.ಎಲ್.ವಿ.ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.

ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ ಪಡೆದು ತೆರಳಿದ್ದಾಗ ವ್ಯಾಪಾರ ವಹಿವಾಟಿನಲ್ಲಿ ಬಂದ ಹಣವನ್ನ ಬ್ಯಾಂಕ್ ಗೆ ಕಟ್ಟುವಂತೆ ಮಹದೇವ್ ಗೆ ಸೂಚಿದಿ ಹೋಗಿದ್ದರು.

ರಜೆ ಮುಗಿಸಿ ವಾಪಸ್ ಬಂದಾಗ ವ್ಯಾಪಾರದಿಂದ ಸಂಗ್ರಹವಾಗಿದ್ದ 6.70 ಲಕ್ಷ ಹಣ ಕ್ಯಾಶಿಯರ್ ಮಹದೇವ್ ಕಟ್ಟದೆ ಕೆಲಸಕ್ಕೂ ಬಾರದೆ ನಾಪತ್ತೆಯಾಗಿರುವುದು ಗೊತ್ತಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಅವರು,ಮಹದೇವ್ ರನ್ನ ಪತ್ತೆ ಹಚ್ಚಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಆತ ಸಮಯಾವಕಾಶ ಪಡೆದಿದ್ದ.

ಆದರೆ ಆತ ಇನ್ನೂ ಹಣ ಹಿಂದಿರುಗಿಸಿಲ್ಲಾ ಕೈಗೂ ಸಿಗುತ್ತಿಲ್ಲ,ಹಾಗಾಗಿ ಆನಂದ್ ಅವರು ಮಹದೇವ್ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.