ಮೈಸೂರು, ಮಾ.8: ಕಿಡಿಗೇಡಿಗಳ ಗುಂಪೊಂದು ಮುಚ್ಚಿದ್ದ ಬಾರನ್ನು ಬಲವಂತವಾಗಿ ತೆಗೆಸಿ, ಕ್ಯಾಷಿಯರ್ ಗೆ ನಿಂದಿಸಿ ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟೆಲ್ ಕೇಸ್ ಹೊತ್ತೊಯ್ದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಹುಲ್ಲಹಳ್ಳಿಯ ನ್ಯೂ ಕಾರವಾನ್ ಬಾರ್ ನಲ್ಲಿ
ಈ ಘಟನೆ ನಡೆದಿದ್ದು,ಈ ಸಂಬಂಧ ಕ್ಯಾಷಿಯರ್ ವೆಂಕಟೇಶ್ ಅವರು ಕಿಶೋರ್, ಚಂದನ್ ಸೇರಿದಂತೆ 7 ಮಂದಿ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಧ್ಯರಾತ್ರಿ ಬಾರ್ ಕ್ಲೋಸ್ ಮಾಡಿ ಹಣ ಲೆಕ್ಕ ಮಾಡುತ್ತಿದ್ದ ವೇಳೆ ಕಿಶೋರ್, ಚಂದನ್ ಹಾಗೂ 5 ಮಂದೀ ಬಂದು ಬಾಗಿಲ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಶೆಟರ್ ಓಪನ್ ಮಾಡಿ ಒಳಗೆ ನುಗ್ಗಿದ್ದಾರೆ.
ಕ್ಯಾಷ್ ಬಾಕ್ಸ್ ಮೇಲೆ ಕುಳಿತು ಧಂಕಿ ಹಾಕಿ ಬೆದರಿಸಿ ಬಿಯರ್ ಹಾಗೂ ವಿಸ್ಕಿ ಬಾಟಲ್ ಗಳನ್ನು ಬಾಕ್ಸ್ ಒಂದಕ್ಕೆ ತುಂಬಿಕೊಂಡು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಕಿಶೋರ್ ಹಾಗೂ ಚಂದನ್ ರನ್ನ ಪೊಲೀಸರು ಬಂಧಿಸಿದ್ದಾರೆ.