ಮೈಸೂರು: ಮೈಸೂರಿನ ಪ್ರಜ್ಞಾವಂತ ಪದವೀಧರರು 1923ರಲ್ಲಿ ಪ್ರಾಂಭಿಸಿದ ದಿ ಗ್ರಾಜ್ಯುಯೇಟ್ಸ್ ಕೋ- ಆಪರೇಟಿವ್ ಬ್ಯಾಂಕ್ ನೂರನೇ ವಾರ್ಷಿಕ ಮಹಾಸಭೆಯತ್ತ ಸಾಗಿದ್ದು ಇದರ ಯಶಸ್ಸು ಪ್ರತಿಯೊಬ್ಬ ಸದಸ್ಯರಿಗೂ ಸಲ್ಲುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಎನ್.ಶ್ರೀನಿವಾಸ ತಿಳಿಸಿದರು.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ.ಗ್ರಾಜ್ಯುಯೇಟ್ಸ್ ಕೋ- ಆಪರೇಟಿವ್ ಬ್ಯಾಂಕ್ ನೂರನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ವ್ಯವಸ್ಥೆ ಬಲಪಡಿಸಲು ಬ್ಯಾಂಕ್ ನ ಸದಸ್ಯರು ಪ್ರತಿವಾರಕ್ಕೊಮ್ಮೆ ಹೆಚ್ಚಿನ ವಹಿವಾಟು ನಡೆಸಿ ಬ್ಯಾಂಕಿನ ಶ್ರೇಯೋಭಿವೃದ್ದಿಗಾಗಿ ಸಹಕರಿಸಬೇಕು ಎಂದು ಶ್ರೀನಿವಾಸ್ ಮನವಿ ಮಾಡಿದರು,
ಇದೇ ವೇಳೆ ಬ್ಯಾಂಕ್ ನ ಸದಸ್ಯರ ಪ್ರಸಕ್ತ ಸಾಲಿನ ಹತ್ತನೇ ತರಗತಿ,ಸಿ.ಬಿ.ಎಸ್.ಇ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಕೂಡಾ ನೆರವೇರಿತು.
ಬ್ಯಾಂಕ್ ನ ಉಪಾಧ್ಯಕ್ಷರಾದ ಸುಜಾತ ವೆಂಕಟರಾಜು, ನಿರ್ದೇಶಕರುಗಳಾದ ಆರ್. ಅನಂತರಾಮು, ಪ್ರೋ ಪಿ.ವಿ. ನರಹರಿ, ಟಿ.ಎಸ್. ರವಿಶಂಕರ್, ಎಂ.ಎ ಹೇಮಲತಾ, ಕೆ.ಜಿ. ಸತೀಶ್, ಎಸ್. ಎನ್ ಜಗದೀಶ್, ಕೆ.ವಿ. ಲಕ್ಷ್ಮಿದೇವಿ, ಸಿ.ಕಮಲಮ್ಮ, ಸುಜಾತ ಎಸ್. ರಾವ್, ಎಲ್. ಸೋಮಣ್ಣ,ವರಲಕ್ಷ್ಮಿ.ಆರ್, ವೃತ್ತಿಪರ ನಿರ್ದೇಶಕರಾದ ರಾಜಾರಾಂ ಎಂ.ಎಸ್, ಆರ್.ದೇವರಾಜ್, ಕಾನೂನು ಸಲಹೆಗಾರರಾದ ಸೀತರಾಮು, ವ್ಯವಸ್ಥಾಪಕ ಟಿ.ವಿ. ಮಹೇಶ, ಎಸ್. ಗಾಯತ್ರಿ, ನಾಗರಾಜ್, ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಪಾಲ್ಗೊಂಡಿದ್ದರು.