ಮೈಸೂರು: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ,ದೌರ್ಜನ್ಯ ಖಂಡಿಸಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ
ಜಿಲ್ಲೆಯಾದ್ಯಂತ ಸಮಿತಿಯ ಸದಸ್ಯರು ಬಂದಿದ್ದರು. ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಆಕ್ರಮಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಹಿಂದೂ ಹಿತರಕ್ಷಣಾ ಸಮಿತಿಯೊಂದಿಗೆ ವಿವಿಧ ಹಿಂದುಪರ ಸಂಘಟನೆಗಳು ಬಿಜೆಪಿ,ಜೆಡಿಎಸ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ಅಲ್ಲಿನ ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡದೆ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಂದೇ ಮಾತರಂ,ಬೊಲೋ ಭಾರತ್ ಮಾತಾ ಕೀ ಜೈ,ನಾವೆಲ್ಲ ಹಿಂದು ನಾವೆಲ್ಲ ಒಂದು, ಹಿಂದೂಸ್ಥಾನ್ ಜಿಂದಾಬಾದ್ ಜೈ ಹಿಂದ್ ಇವೇ ಮೊದಲಾದ ಘೊಷಣೆಗಳನ್ನು ಕೂಗುವ ಮೂಲಕ ಜನರಲ್ಲಿ ಕಿಚ್ಚೆಬ್ಬಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರು, ಮೈಸೂರಿನ ಬಿಜೆಪಿ ನಗರಧ್ಯಕ್ಷರಾದ ಎಲ್ ನಾಗೇಂದ್ರ, ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷರಾದ ಮಹದೇವಸ್ವಾಮಿ, ಅಲ್ಲದೆ ಮೈಸೂರು ಜಿಲ್ಲಾ ಗ್ರಾಮಂತರ ಬಿಜೆಪಿ ಮಹಿಳಾಮೋರ್ಚಾ ಅಧ್ಯಕ್ಷೆ ನಳಿನಿ,ಪಿರಿಯಾಪಟ್ಟಣ ಮಾಜಿ ತಾಲೂಕು ಪುರಸಭಾ ಸದಸ್ಯರು ಮತ್ತು ಸಾಕಷ್ಟು ಮಹಿಳಾ ಕಾರ್ಯಕರ್ತರು ಹಾಗೂ
ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು.