25 ರ ಯುವಕ 34 ರ ಗೃಹಿಣಿಯೊಂದಿಗೆ ಲವ್ ಗೆ ಬಿದ್ದು ಕೊಂದು ಹಾಕಿದ

Spread the love

ಬೆಂಗಳೂರು: ಇತ್ತೀಚೆಗೆ ಮದುವೆಯಾಗಿ ಮಕ್ಕಳಿರುವ ಗೃಗಿಣಿಯರು ಲವ್,ಗಿವ್ವು ಅಂದಕೊಂಡು ಸಾವು‌ ತಂದುಕೊಳ್ಳೋದು ಹೆಚ್ಚಾಗ್ತಾ ಇದೆ.ಇದಕ್ಕೆ ಬೆಂಗಳೂರಿನಲ್ಲಿ ಅಪ್ಪಟ‌ ಉದಾಹರಣೆಗಳು ಸಾಕಸ್ಟು ಸಿಗುತ್ತೆ.

ಹೀಗೆ ಗೃಹಿಣಿಯೊಬ್ಬಳು ಯುವಕನನ್ನ ಲವ್ ಮಾಡಿ ಗಂಡ ಮಕ್ಕಳಿಗೆ ಮೋಸ ಮಾಡಿ ಕಡೆಗೆ ಕೊಲೆಯಾಗಿಬಿಟ್ಟಿದಾಳೆ.

ಇತ್ತೀಚೆಗೆ ಗೃಹಿಣಿಯರು ಲವ್ ಹಿಂದೆ ಬಿದ್ದು ಕೊಲೆಯಾದ ಬಗ್ಗೆ ಮಾಧ್ಯಮಗಳು ಬೆಳಕು ಚಲ್ಲುತ್ತಲೇ ಇದ್ದರೂ ಇಂತವರು ಮನೆಯವರಿಗೂ ಮೋಸ ಮಾಡಿ ತಾನೂ ಮೋಸ ಹೋಗಿ ಕಡೆಗೆ ಹೆಣವಾಗುವುದು ಮಾಮೂಲು ಆಗಿಬಿಟ್ಟಿದೆ.

ಬೆಂಗಳೂರಿನ ಓಯೋ ರೂಮ್ ನಲ್ಲಿ ಮಹಿಳೆಯನ್ನು 17 ಬಾರಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೂರ್ಣ ಪ್ರಜ್ಞಾಲೇಔಟ್​​ನ ಹೋಟೆಲೊಂದರಲ್ಲಿ ನಡೆದಿದೆ.

ಟೆಕ್ಕಿ ಯಶಸ್​(25) ಎಂಬಾತ ಹತ್ಯೆ ಮಾಡಿದ ಆರೋಪಿ, ಹರಿಣಿ(34) ಹತ್ಯೆಗೀಡಾದ ಮಹಿಳೆ.

ಕೊಲೆಯಾದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ.

ಹರಿಣಿ ಇದ್ದ ಪ್ರದೇಶದಲ್ಲೆ ನಡೆಯುತ್ತಿದ್ದ ಜಾತ್ರೆಗೆ ಯಶಸ್ ಹೋಗಿದ್ದು ಇಬ್ಬರ ಪರಿಚಯವಾಗಿದೆ, ಫೋನ್​ ನಂಬರ್​​ ಬದಲಾಯಿಸಿಕೊಂಡಿದ್ದಾರೆ,ಪರಿಚಯ ಸ್ನೇಹಕ್ಕೆ ತಿರುಗಿ ಚಾಟಿಂಗ್, ಡೇಟಿಂಗ್ ನಡೆದಿದೆ.ಲವ್ ಹೆಸರಲ್ಲಿ ಕೆಲವು ಸಲ ಇಬ್ಬರು ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾರೆ.

ಹಲವು ಬಾರಿ ಇದೇ ರೀತಿ ಭೇಟಿಯಾಗಿ ಫೋನ್​ ನಲ್ಲಿ ಮಾತಾಡುತ್ತಿದ್ದರು.ಇದು ಪತಿ ದಾಸೇಗೌಡನಿಗೆ ಗೊತ್ತಾಗಿ ಫೋನ್​ ಕಿತ್ತುಕೊಂಡು ಪತ್ನಿಯನ್ನ ಮನೆಯಲ್ಲೇ ಕೂಡಿ ಹಾಕಿದ್ದಾರೆ.

ಕೆಲವು ತಿಂಗಳ ನಂತರ ಮತ್ತೆ ಹೊರ ಬಂದಿದ್ದ ಹರಿಣಿ, ಯಶಸ್ ನ ದೂರವಾಣಿಯಲ್ಲಿ ಸಂಪರ್ಕಿಸಿದ್ದಾಳೆ. ಹರಿಣಿ ಇಲ್ಲದೆ ಹುಚ್ಚನಾಗಿದ್ದ ಯಶಸ್​, ಆಕೆಗಾಗಿ ಕಾತರಿಸಿದ್ದ.

ಆಕೆ ಇತ್ತೀಚೆಗೆ ಯಶಸ್ ನನ್ನು ಅವಾಯ್ಡ್ ಮಾಡುತ್ತಿದ್ದಳು,ಹಾಗಾಗಿ ಆಕೆ ಸಿಕ್ಕರೆ ಸಾಯಿಸಲು ನಿರ್ಧರಿಸಿ ಸ್ಕೆಚ್ ಹಾಕಿದ್ದ,ಅದಕ್ಕಾಗಿ ಚಾಕು ಕೂಡ ಖರೀದಿಸಿದ್ದ.

ಜೂನ್ 7ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್​ಗೆ ಹೋಗಿದ್ದರು. ಮೊದಲೇ ಓಯೋ ರೂಮ್​ ಬುಕ್ ಮಾಡಿದ್ದ ಯಶಸ್, ಹರಿಣಿಯೊಂದಿಗೆ ಸಮಯ ಕಳೆದಿದ್ದ. ಬಳಿಕ ಚಾಕುವಿನಿಂದ ಇರಿದು ಹರಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.

ಇದೀಗ ಆರೋಪಿಯನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಿಣಿ ತನ್ನನ್ನು ಕಡೆಗಣಿಸುತ್ತಿದ್ದಳು ಅದಕ್ಕೆ ಕೋಪದಲ್ಲಿ ಕೊಲೆ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ.