ಬೆಂಗಳೂರಲ್ಲಿ ಘೋರ ಘಟನೆ:ಮಕ್ಕಳ ಕೊಂ* ಅಪ್ಪ,ಅಮ್ಮ ಆತ್ಮಹತ್ಯೆ

Spread the love

ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ತಂದೆ,ತಾಯಿ‌ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌

ಈ ದಾರುಣ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನ ಅನೂಪ್(38) ಮತ್ತು ಪತ್ನಿ ರಾಖಿ(35) ಮಕ್ಕಳಾದ ಅನುಪ್ರಿಯ(5) ಪ್ರಿಯಾಂಶ್​(2) ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶ ಅಲಹಾಬಾದ್ ಮೂಲದ ಅನೂಪ್ ಕುಮಾರ್ ದಂಪತಿ ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಸಾಫ್ಟ್ ವೇರ್ ಕಂಪನಿಯಲ್ಲಿ ಅನೂಪ್ ಕೆಲಸ ಮಾಡುತ್ತಿದ್ದರು ಆರ್ ಎಂ ವಿ ಸೆಕೆಂಡ್ ಸ್ಟೇಜ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಅನೂಪ್ ಕುಮಾರ್ ಅವರಿಗೆ 5 ವರ್ಷದ ವಿಶೇಷ ಚೇತನ ಹೆಣ್ಣು ಮಗುವಿನ ಆರೋಗ್ಯದ ಚಿಂತೆ ಕಾಡುತ್ತಿತ್ತು,ಆರ್ಥಿಕವಾಗಿ ಕಷ್ಟವಾಗಿದೆ,ಜತೆಗೆ ಅನೂಪ್ ತಂದೆ ಮನೆಯವರು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ ಇದರಿಂದ ಬಹಳ ನೊಂದಿದ್ದಾಗಿ ಸಹೋದರನಿಗೆ ಮೆಸೇಜ್ ಮಾಡಿ ತಿಳಿಸಿದ್ದಾರೆ.

ಒಟ್ಟಾರೆ ಏನೂ ಅರಿಯದ ಕಂದಮ್ಮಗಳನ್ನೂ‌ ಸಾಯಿಸಿರುವುದು ನೋಡಿದರೆ ಎಷ್ಟರಮಟ್ಟಿಗೆ ಅನೂಪ್ ಮತ್ತು ರಾಖಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಅನ್ನಿಸುತ್ತಿದೆ.