ಬೆಂಗಳೂರು-ಮೈಸೂರು ರೈಲುಗಳು ಶ್ರೀರಂಗಪಟ್ಟಣದಲ್ಲಿ ನಿಲುಗಡೆಗೆ ಮನವಿ

Spread the love

ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುವ ರೈಲುಗಳು ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಕೋರಿ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ವಿ ಸೋಮಣ್ಣನವರಿಗೆ ಮನವಿ ಮಾಡಲಾಯಿತು.

ಇಂದು ಸಚಿವ ವಿ ಸೋಮಣ್ಣ ಅವರನ್ನು ಮೈಸೂರಿನ ವಿಶ್ರಾಂತಿ ಗ್ರಹದಲ್ಲಿ ಭೇಟಿಯಾಗಿ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ಮೊದಲು ನಿಲುಗಡೆ ಆಗುತ್ತಿದ್ದ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಹಿಂದೂ ಜಾಗರಣ ವೇದಿಕೆಯವರು ಶ್ರೀರಂಗಪಟ್ಟಣ ಜನತೆ ಪರವಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಳೆದ ಬಾರಿ ಮಂಡ್ಯ ಜಿಲ್ಲೆ ಮಾಜಿ ಸಂಸದರಾದ ಸುಮಲತಾ ಅವರಿಗೆ ನೀಡಿದ ಮನವಿಯ ಪ್ರತ್ಯುತ್ತರವಾಗಿ ಕೇಂದ್ರ ರೈಲ್ವೆ ಇಲಾಖೆಯಿಂದ ಬಂದಿದ್ದ ಉತ್ತರದ ಪ್ರತಿಯನ್ನು ಶ್ರೀರಂಗಪಟ್ಟಣದಲ್ಲಿ ರೈಲು ನಿಲುಗಡೆಯಾದರೆ ಗರಿಷ್ಠ 3000 ಆದಾಯ ಬರುತ್ತದೆ ಆದರೆ ಒಮ್ಮೆ ರೈಲು ನಿಂತು ಹೊರಡಲು 8 ರಿಂದ 10,000 ಖರ್ಚು ಬರುತ್ತದೆ ಎಂದು ರೈಲ್ವೆ ಇಲಾಖೆಯಿಂದ ಬಂದಿದ್ದ ಪ್ರತಿ ಉತ್ತರವನ್ನು ಲಗತ್ತಿಸಿ ಮನವರಿಕೆ ಮಾಡಿಕೊಡಲಾಯಿತು.

ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ ಅವರು, ಪೂರ್ವದಲ್ಲಿ ನಿಲಗಡೆಯಾಗುತ್ತಿದ್ದ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡುವ ಭರವಸೆ ನೀಡಿದರು.

ಈ ವೇಳೆ ಶ್ರೀರಂಗಪಟ್ಟಣ ತಾಲೂಕಿನ ಪುರ ಜನರು ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.
.