ಬೆಂಗಳೂರು: ಡಾ ಜಾನಪದ ಎಸ್ ಬಾಲಾಜಿ ಅವರ ಜಾನಪದ ಸೇವೆ ಅನುಕರಣಿಯ ಎಂದು ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಡಾ ರಿಯಾಜ್ ಪಾಷ ತಿಳಿಸಿದರು.
ಬೆಂಗಳೂರಿನ ಕೆ ಆರ್ ಪುರಂ ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಪದಗ್ರಹಣ, ಜಾನಪದ ಶಿವರಾತ್ರಿ ಹಾಗೂ ಸಂಕ್ರಾಂತಿ ಸಂಭ್ರಮವನ್ನು ಉದ್ಘಾಟಿಸಿ ಡಾ. ರಿಯಾಸ್ ಭಾಷಾ ಮಾತನಾಡಿದರು.

ಇದೇ ವೇಳೆ ಡಾ. ಬಾಲಾಜಿ ಅವರ ಸಾಧನೆ, ಜಾನಪದ ಪ್ರೇಮವನ್ನು ಶ್ಲಾಘಿಸಲಾಯಿತು.
ಕನ್ನಡ ಜಾನಪದ ಪರಿಷತ್
ದಶಮಾನೋತ್ಸವ ಆಚರಿಸಿಕೊಳ್ಳಲು ಕಾರಣಕರ್ತರಾದ ಡಾ.ಜಾನಪದ ಎಸ್ ಬಾಲಾಜಿಯವರಿಗೆ ಇದರ ಎಲ್ಲಾ ಯಶಸ್ಸು ಸಲ್ಲಬೇಕು ಎಂದು ಡಾ.ರಿಯಾಜ಼್ ಪಾಷ ಹೇಳಿದರು.
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಾಲಿಮಠ ಮಾತನಾಡಿ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಜನಪದ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ರೂಪುರೇಷೆ ಮಾಡಿರುವುದಾಗಿ ತಿಳಿಸಿದರು.
ಶ್ರೀ ಕೃಷ್ಣಮೂರ್ತಿಯವರಿಗೆ ಗೌರವ ಅಧ್ಯಕ್ಷರಾಗಿ ಜಿಲ್ಲಾಧ್ಯಕ್ಷರು ಪದಪತ್ರ ನೀಡಿದರು.

ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಡಾ.ರತ್ನಕುಮಾರಿ ಜಿ.ಎಂ, ಅಜಿತ್ ಕುಮಾರ್ ಮತ್ತಿತರರು ಹಾಜರಿದ್ದರು.