ಮಧ್ಯರಾತ್ರಿ ಬೈಕ್ ಕದಿಯುತ್ತಿದ್ದವನ ಸಿನಿಮೀಯ ರೀತಿಯಲ್ಲಿ ಹಿಡಿದ ಮಾಲೀಕ

Spread the love

ಬೆಂಗಳೂರು: ಮಧ್ಯರಾತ್ರಿ ಬೈಕ್ ಕದಿಯಲು ಬಂದಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜೆಪಿ ನಗರದಲ್ಲಿ ನಡೆದಿದೆ

ನಿನ್ನೆ ಮದ್ಯ ರಾತ್ರಿ ಐನಾತಿ ಬೈಕ್ ಕಳ್ಳ ಜೆಪಿ ನಗರ ಮೊದಲನೇ ಹಂತ 34ನೇ ಮುಖ್ಯ ರಸ್ತೆಯಲ್ಲಿರುವ ಪಿ ಎಂ ಆರ್ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮುಂಭಾಗ ನಿಲ್ಲಿಸಿದ್ದ ಯಮಹ ಆರ್ ಎಕ್ಸ್ 100 ಬೈಕ್ ಹ್ಯಾಂಡಲ್ ಮುರಿದು ತಳ್ಳಿಕೊಂಡು ಹೋಗಿದ್ದಾನೆ.

ಬೈಕ್ ಮಾಲೀಕ ರಾಕೇಶ್ ಅವರ ಪತ್ನಿಗೆ ಶಬ್ದ ಕೇಳಿಸಿದೆ,ತಕ್ಷಣ ಅವರು ಪತಿಯನ್ನು ಎಚ್ಚರಿಸಿ ವಿಷಯ ತಿಳಿಸಿದ್ದಾರೆ.

ಕೂಡಲೇ ರಾಕೇಶ್ ಅಕ್ಕಪಕ್ಕದ ನಿವಾಸಿಗಳಿಗೆ ವಿಷಯ ತಿಳಿಸಿ ಸುಮಾರು ಒಂದು ಕಿಲೋಮೀಟರ್ ಸಿನಿಮೀಯ ರೀತಿಯಲ್ಲಿ ಛೇಸ್ ಮಾಡಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಕಳ್ಳನನ್ನು ಮರಕ್ಕೆ ಕಟ್ಟಿಹಾಕಿ ಜೆಪಿ ನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಜೆಪಿ ನಗರ ಪೊಲೀಸರು ಕಳ್ಳನನ್ನು ಬಂಧಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.