ಸೌಹಾರ್ದ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಸರಾ ಉತ್ಸವ ಸಹಕಾರಿ- ಪುಷ್ಪ ಅಮರನಾಥ್

Spread the love

ಮೈಸೂರು: ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ದಸರಾ ಮಹೋತ್ಸವ ಸಹಕಾರಿ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಬಿ. ಪುಷ್ಪ ಅಮರನಾಥ್ ಹೇಳಿದರು.

ಶ್ರೀ ದುರ್ಗಾ ಫೌಂಡೇಶನ್ ಹಾಗೂ ಡಾಕ್ಟರ್ ಎಂ ಶಾಂತ ರಾಮಕೃಷ್ಣ ಅಭಿಮಾನಿ ಬಳಗದ ವತಿಯಿಂದ ‌ಹಮ್ಮಿಕೊಂಡಿದ್ದ ದಸರಾ ಗಜಪಡೆಯ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಅರಿಶಿನ ಕುಂಕುಮ, ವಿಳೆದೆಲೆ, ಬಾಳೆಹಣ್ಣು, ಹಾಗೂ ತೆಂಗಿನಕಾಯಿ, ಸೀರೆ ವಿತರಿಸುವ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರ ಒಗ್ಗೂಡುವಿಕೆಯ ಮೂಲಕ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲು ಪಿಸುವುದೇ ಈ ಉತ್ಸವದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ,ನವರಾತ್ರಿಗೆ ಅಪಾರ ಶಕ್ತಿ ಇದ್ದು 9 ದಿನಗಳ ಕಾಲ ಆಂತರಿಕ ದ್ವೇಷ, ಅಸೂಯೆ ತೊಲಗಿಸಿ ದೈವೀ ಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನವರಾತ್ರಿಯ ವಿಶೇಷತೆ ಎಂದು ಬಣ್ಣಿಸಿದರು.

ವನ್ಯಜೀವಿ ವಿಭಾಗದ ಡಿ ಸಿ ಎಫ್ ಡಾಕ್ಟರ್ ಐ ಬಿ ಪ್ರಭುಗೌಡ, ಸಮಾಜ ಸೇವಕರಾದ ಡಾಕ್ಟರ್ ಎಂ ಶಾಂತ ರಾಮಕೃಷ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ನಾಗಮಣಿ ಜೆ, ದರ್ಶನ್,ರೇಣುಕಾ ಹೊರಕೇರಿ,ಸವಿತಾ ಘಾಟ್ಕೆ,ಸಂತೋಷ್ ಕಿರಾಳು, ಶಾರದಾ ಮತ್ತಿತರರು ಹಾಜರಿದ್ದರು.