ಪೌರಕಾರ್ಮಿಕರಿಗೆ ಬಾಗಿನ ಸಮರ್ಪಣೆ

Spread the love

ಮೈಸೂರು: ಗೌರಿ-ಗಣೇಶ ಹಬ್ಬವು ಸಾಮರಸ್ಯದ ಸಂಕೇತವಾಗಿದ್ದು ಈ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಶ್ರೀ ದುರ್ಗ ಫೌಂಡೇಶನ್ ಅಧ್ಯಕ್ಷೆ
ರೇಖಾ ಶ್ರೀನಿವಾಸ್ ಹೇಳಿದರು.

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಸ್ವಚ್ಛತಾ ಸೇನಾ ನಿಗಳಾದ ಪೌರಕಾರ್ಮಿಕರಿಗೆ ಸ್ವರ್ಣ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಸಮರ್ಪಣೆ ಮಾಡಿ ಅವರು ಮಾತನಾಡಿದರು.

ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನ ಪೂಜಿಸುವುದು ಹಿಂದು ಧರ್ಮಿಯರ ಪದ್ಧತಿ. ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸತಂದಿದೆ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕ ರಾಜ್ ಮಾತನಾಡಿ, ಬಾಲಗಂಗಾಧರ ತಿಲಕ್ ಅವರು ಆಗಿನ ಸಂದರ್ಭದಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ
ಭಾರತೀಯರನ್ನು ಸಂಘಟಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆನೀಡಿದ್ದರು.ಅದರೆ ಪ್ರಸ್ತುತವಾಗಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವ ಅವಶ್ಯಕವಾಗಿದ್ದು ನಮ್ಮ ಸಂಸ್ಕೃತಿ ರಕ್ಷಣೆ ಮಾಡಲು ಈ ಹಬ್ಬಗಳು ಸಹಕಾರಿ ಎಂದರು.

50ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ವಿತರಿಸಿದರು

ಸಮೃದ್ಧಿ ವಾರ್ತಾಪತ್ರಿಕೆ ಸಂಪಾದಕಿ ಸಹನಗೌಡ, ನಟಿ ರೇಣುಕಾ, ಅಶ್ವಿನಿ ಗೌಡ, ಉಮೇಶ್, ರಶ್ಮಿ,ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ
ಸವಿತಾ ಘಾಟ್ಕೆ, ಸೂರಜ್, ಸದಾಶಿವ್, ಸುರೇಶ್ ಮತ್ತಿತರರು ಹಾಜರಿದ್ದರು.