ಬಿ ರವಿಕುಮಾರ್ ಬೆಳವಾಡಿ ಹುಟ್ಟುಹಬ್ಬ:ಆರೋಗ್ಯ,ನೇತ್ರ ತಪಾಸಣೆ

Spread the love

ಮೈಸೂರು, ಏ.3: ಮೈಸೂರಿನ ಶ್ರೀ ಚಾಮುಂಡೇಶ್ವರಿ ನಗರ ಅಭಿವೃದ್ಧಿ ಸಹಕಾರ ಸಂಘದ ಸಂಸ್ಥಾಪಕರಾದ ಬಿ ರವಿಕುಮಾರ್ ಬೆಳವಾಡಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮೃದ್ಧಿ ಟ್ರಸ್ಟ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಕೆ ವಿ ಸಿ ಸೂಪರ್ ಸ್ಪೆಸಿಯಾಲಿಟಿ ಆಸ್ಪತ್ರೆ, ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಒಂದು ಹೆಜ್ಜೆ ರಕ್ತದಾನ ಬಳಗದ ಅಧ್ಯಕ್ಷ ರಕ್ತಧಾನಿ ಮಂಜು ಅವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ,ನೇತ್ರ ತಪಾಸಣೆ, ರಕ್ತದಾನ ಶಿಬಿರ ಹಾಗೂ ಪೌರ ಕಾರ್ಮಿಕರಿಗೆ ಉಚಿತ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ
ಬಿ ರವಿಕುಮಾರ್ ಬೆಳವಾಡಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಯುವ ಮುಖಂಡರು ಮದನ್ ಮಾದೇಶ್, ಬೆಳವಾಡಿ ಮುಖಂಡರಾದ ಶಿವಣ್ಣ, ಮೊಬೈಲ್ ರಮೇಶ್, ಮಹದೇವು, ದೇವರಾಜು,ಮೈಸೂರು ಬೆಳವಾಡಿ ಸೈನಿಕ ಅಕಾಡೆಮಿ ಸಂಸ್ಥಾಪಕ ಶ್ರೀಧರ್ ಮತ್ತು ಬಡಾವಣೆಯ ಎಲ್ಲಾ ಹಿರಿಯ ಮುಖಂಡರು, ಮಹಿಳೆಯರು, ಸ್ನೇಹಿತರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಸುತ್ತಮುತ್ತಲಿನ ಬಡಾವಣೆಯ ವಾಸಿಗಳು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ವಿಶೇಷವಾಗಿ 150 ಕ್ಕಿಂತ ಹೆಚ್ಚು ಯುವಕರು ಯುವತಿಯರು ರಕ್ತದಾನ ಮಾಡಿ ಮಾದರಿಯಾದರು.

ಖ್ಯಾತ ರಂಗ ಕಲಾವಿದರಾದ ವಿಶ್ವನಾಥ್ ಎಲ್ ಮತ್ತು ತಂಡದ ವತಿಯಿಂದ ಜಾನಪದ ಗಾಯನ ಹಮ್ಮಿಕೊಂಡಿದ್ದು ಎಲ್ಲರ ಮನಸೆಳೆಯಿತು.