ಮೈಸೂರು: ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯಡಿ ಕೊಡಮಾಡುವ ವಾರ್ಷಿಕ ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಪ್ರಶಸ್ತಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ ಲಭ್ಯವಾಗಿದೆ.
ಈ ಪ್ರಶಸ್ತಿಗೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಾದ ಲೇಖನಾ ಅರಸ್ ಎಸ್ ಮತ್ತು ಸಹನಾ ಕೆ ಅವರು ಭಾಜನರಾಗಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಬ್ದುಲ್ ರಹಿಮಾನ್ ಎಂ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಪ್ರೊ. ಭೀಮೇಶ್ ಎಚ್.ಜೆ, ಲತಾರಾಣಿ ಏಚ್. ಎಂ. ಹಾಗೂ ಡಾ. ಲಕ್ಷ್ಮಣ್ ಮತ್ತು ಶುಭಾ ಅವರು
ಲೇಖನಾ ಅರಸ್ ಎಸ್ ಮತ್ತು ಸಹನಾ ಕೆ ಅವರುಗಳನ್ನು ಅಭಿನಂದಿಸಿ ಶುಭ ಹಾರಿಸಿದರು.