ಮೈಸೂರು: ಸಮಾಜ ಸೇವೆ ಮತ್ತು ಸಂಘಟನೆ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಪ್ರತಿಭಾವಂತ ಯುವಕ ರಕ್ತದಾನಿ ಮಂಜು ಅವರು ಈ ವರ್ಷದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭವನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿಯನ್ನು ಯನ್ನು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಅವರು ಆಯೋಜಿಸಿದ್ದ ಕಾವ್ಯಶ್ರೀ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ-2025 ಕಾರ್ಯಕ್ರಮದ ಅಂಗವಾಗಿ ಪ್ರದಾನ ಮಾಡಲಾಯಿತು.
ಈ ಸಮಾರಂಭವು ಭಾನುವಾರ ವಿಜಯನಗರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಆರೋಡ ಭಾರತೀ ಮಹಾ ಸ್ವಾಮಿಗಳು. ಶ್ರೀ ಪೂಜ್ಯ ಗುರು ಚರಂತಯ್ಯ ಸ್ವಾಮಿಗಳು ವಹಿಸಿದ್ದರು.
ಪ್ರಾಸ್ತಾವಿಕ ಭಾಷಣವನ್ನು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ
ಡಾ. ಬಿ ಶಿವಣ್ಣ ಅವರು ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಪ್ರಭ ಕಾರ್ಯನಿರ್ವಾಹಕ ಸಂಪಾದಕ ಆಂಶಿ ಪ್ರಸನ್ನ ಕುಮಾರ್, ಸಮ್ಮೇಳನ ಅಧ್ಯಕ್ಷ ಡಾ. ನಾಗರಾಜು ಬಿ ಬೈರಿ ನೆರವೇರಿಸಿದರು.
ಹಲವಾರು ಗಣ್ಯರ ಸಮ್ಮುಖದಲ್ಲಿ ರಕ್ತದಾನಿ ಮಂಜು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೂರಾರು ಬಾರಿಗೆ ಉಚಿತವಾಗಿ ರಕ್ತದಾನ ಮಾಡಿ ಸಾವಿರಾರು ಜೀವಗಳ ಉಳಿಸಿ ಸೇವೆ ಸಲ್ಲಿಸುತ್ತಿರುವ, ಮಂಜು ಅವರು, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಅವರ ಈ ನಿಸ್ವಾರ್ಥ ಸಮಾಜ ಸೇವೆ ಮತ್ತು ಸಂಘಟನಾ ಕೌಶಲ್ಯವನ್ನು ಪರಿಗಣಿಸಿ, ಟ್ರಸ್ಟ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಮಂಜು ಅವರ ಸಾಧನೆ ಸಮಾಜ ಸೇವೆಯನ್ನು ವಿವಿಧ ಸಮಾಜದ ಮುಖಂಡರು, ರಕ್ತದಾನ ಸಂಘಗಳು ಮತ್ತು ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ.