ಶ್ರಾವಣ ಶನಿವಾರ:ಮುದ್ದೆ ಅವರೆಕಾಳು ಸಾರು ಊಟ

Spread the love

ಮೈಸೂರು: ಮಂಡ್ಯ ಜಿಲ್ಲೆಯ ಮೈಸೂರು ನಿವಾಸಿಗಳು ಪುಣ್ಯಕೋಟಿ ಸೇವಾ ಟ್ರಸ್ಟ್ ಮತ್ತು ಮೈಸೂರು ಜಿಲ್ಲೆಯ ನಾಗರೀಕರ ಸಹಯೋಗದಲ್ಲಿ ಶ್ರಾವಣ ಶನಿವಾರವನ್ನು‌ ಅತ್ಯಂತ ವಿಶೇಷವಾಗಿ ಆಚರಿಸಿದ್ದಾರೆ.

ಪೂಜ್ಯ ನಾಡೋಜ ಶ್ರೀ ಭಾಷ್ಯಂ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ವಿಜಯನಗರದಲ್ಲಿ ಸಾರ್ವಜನಿಕರಿಗಾಗಿ ಅವರೇ ಕಾಳು ಮುದ್ದೆ ಊಟ ಆಯೋಜಿಸಲಾಗಿತ್ತು.

ಈ‌ ವಿಶೇಷ ಊಟಕ್ಕೆ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಚಾಲನೆ ನೀಡಿದರು.

ಪುಣ್ಯಕೋಟಿ ಸೇವಾ ಟ್ರಸ್ಟ್ ಅಧ್ಯಕ್ಷರೂ ಹಾಗೂ ಆಯೋಜಕರಾದ ಹನುಮಂತೇಶ್,ಪುಣ್ಯಕೋಟಿ ಸೇವಾ ಟ್ರಸ್ಟ್ ನವರು,ಮಂಡ್ಯದ ಮೈಸೂರು ನಿವಾಸಿಗಳು ಮತ್ತಿತರರು ಹಾಜರಿದ್ದರು.