ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು

ಮಂಗಳೂರು,ಆ.22: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ.

ತಡರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಡಿ ಪರಾರಿಯಾಗಿದ್ದಾರೆ.

ಮನೆಗೆ ಸಣ್ಣ,ಪುಟ್ಟ ಹಾನಿಯಾಗಿದೆ. ಪಾಂದವೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು Read More

ಚಾಮರಾಜನಗರಕ್ಕೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ:ಸಿದ್ದು

ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ ವನ್ನು ಸಿಎಂ ಸಿದ್ದರಾಮಯ್ಯ‌ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಿದ್ದು,ಪರಿಸರ ಪ್ರವಾಸೋಧ್ಯಮಕ್ಕೆ ಚಾಮರಾಜನಗರ ಉತ್ತಮ, ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ನಗರ ಬಹಳ ಹಿಂದೆ ಉಳಿದಿದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂದು ಬಿಂಬಿಸಿದರು, ಆದರೆ ನಾನು ಮುಖ್ಯಮಂತ್ರಿಯಾಗಿಯೇ ಹತ್ತಕ್ಕೂ ಹೆಚ್ಚು ಬಾರಿ ಜಿಲ್ಲೆಗೆ ಬಂದಿದ್ದೇನೆ, ಇಲ್ಲಿಗೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ನೀವು ನನ್ನ ಕುರ್ಚಿ ಅಲುಗಾಡಿಸುತ್ತಲೇ ಇರಿ, ನನ್ನ‌ ಕುರ್ಚಿ ಗಟ್ಟಿ ಆಗುತ್ತಲೇ ಇರುತ್ತೆ ಎಂದು ಬಿಜೆಪಿ-ಜೆಡಿಎಸ್ ನವರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.

ಯಾರು ಏನೆ ಷಡ್ಯಂತ್ರ ಮಾಡಿದರೂ ನಾನು ಇನ್ನಷ್ಟು ಗಟ್ಟಿಯಾಗಿ ಅಧಿಕಾರದಲ್ಲಿದ್ದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸ್ತಲೇ ಇರುವೆ ಎಂದು ದೃಢವಾಗಿ ಸಿಎಂ ಹೇಳಿದರು.

 

ಚಾಮರಾಜನಗರಕ್ಕೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ:ಸಿದ್ದು Read More

ಬೆಳ್ಳಂ ಬೆಳಿಗ್ಗೆ ಹಿಂಡಲಗಾ ಜೈಲಿನ ಮೇಲೆ 200 ಕ್ಕೂ ಹೆಚ್ಚು ಪೊಲೀಸರ ದಾಳಿ

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ಬೆಳ್ಳಂ ಬೆಳಿಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶಾಕ್ ನೀಡಿದರು.

ಮುಂಜಾನೆ ಸುಮಾರು 5 ಗಂಟೆಗೆ ಕಮಿಷನರ್ ಇಡಾ ಯಾರ್ಟಿನ್ ಮಾರ್ಬನಿಂಗ್ ನೇತೃತ್ವದಲ್ಲಿ ಹಿಂಡಲಗಾ ಜೈಲಿನ ಮೇಲೆ ದಾಳಿ ನಡೆಯಿತು.

40 ಅಧಿಕಾರಿಗಳು ಮತ್ತು 220ಕ್ಕೂ ಹೆಚ್ಚು ಸಿಬ್ಬಂದಿ ಈ ದಾಳಿ ನಡೆಸಿದರು, ಈ ವೇಳೆ
ಮೂರು ಚಾಕು,10 ತಂಬಾಕು ಪೊಟ್ಟಣ, ಸಿಗರೇಟು, ಸಣ್ಣ ಹೀಟರ್ ತಂತಿ ಬಂಡಲ್, ಎಲೆಕ್ಟ್ರಿಕ್ ತಾತ್ಕಾಲಿಕ ಒಲೆ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿ 260ಕ್ಕೂ ಅಧಿಕ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಳ್ಳಂ ಬೆಳಿಗ್ಗೆ ಹಿಂಡಲಗಾ ಜೈಲಿನ ಮೇಲೆ 200 ಕ್ಕೂ ಹೆಚ್ಚು ಪೊಲೀಸರ ದಾಳಿ Read More

ರಾಜ್ಯ ಅಭಿವೃದ್ದಿ ಮಾಡದೆ ಭ್ರಷ್ಟಾಚಾರ ಮಾಡಿದ್ದಾರೆ-ವಿಜಯೇಂದ್ರ ಕಿಡಿ

ಮಂಡ್ಯ: ಕಾಂಗ್ರೆಸ್‌ ನವರು ಅನೇಕ ಭರವಸೆ ನೀಡಿ ಅಧಿಕಾರಕ್ಕೆ ಬಂದರು, ಆದರೆ ರಾಜ್ಯವನ್ನು ಅಭಿವೃದ್ದಿ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯ ನಾಲ್ಕನೇ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನ ಕಿತ್ತೆಸೆಯಬೇಕೆಂಬ ಸಂಕಲ್ಪ ಮಾಡಯೇ ಪಾದಯಾತ್ರೆ ಮಾಡುತ್ತಿದ್ದೇವೆ, ರಾಜ್ಯದ ಜನರಿಗೆ ಇದು ಚುನಾಯಿತ ಸರಕಾರ ಎಂದು ಅನಿಸುತ್ತಿಲ್ಲ ಇಂತಹ ಭ್ರಷ್ಟ ಸರಕಾರ ಮತ್ತು ಭ್ರಷ್ಟ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂದು ವಿಜಯೇಂದ್ರ ಹೇಳಿದರು.

ರಾಜ್ಯ ಅಭಿವೃದ್ದಿ ಮಾಡದೆ ಭ್ರಷ್ಟಾಚಾರ ಮಾಡಿದ್ದಾರೆ-ವಿಜಯೇಂದ್ರ ಕಿಡಿ Read More

ಹಾಸನ ಜಿಲ್ಲೆ ಬಾಳ್ಳುಪೇಟೆ ಬಳಿ ಭೂಕುಸಿತ: ಮಂಗಳೂರು ರೈಲ್ವೆ ಮಾರ್ಗ ಬಂದ್

ಹಾಸನ: ಬೆಂಗಳೂರು- ಹಾಸನ-ಮಂಗಳೂರು ಮಾರ್ಗದ ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದ ಮಣ್ಣು ಕುಸಿದ ಪರಿಣಾಮ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಸ್ಥಗಿತವಾಗಿದೆ.

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ರೈಲು ನಿಲ್ದಾಣ ಬಳಿ ರೈಲ್ವೆ ಹಳಿ ಮೇಲೆಯೇ ಭಾರಿ ಪ್ರಮಾಣದ ಕಲ್ಲು ಬಂಡೆ ಮತ್ತು ಮಣ್ಣು ಕುಸಿದು ಬಿದ್ದಿದ್ದು ರೈಲು ಸ್ಥಗಿತಗೊಂಡ‌ ಕಾರಣ ಸಾವಿರಾರು ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿ ಪಡಿಪಾಟಲು ಪಟ್ಟರು.

ಮಧ್ಯರಾತ್ರಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಆಯಾ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.

ಹಾಸನ -ಮಂಗಳೂರು ಮಾರ್ಗದ ಕಿಲೋಮಿಟರ್ 42/ 43ರ ಮಧ್ಯೆ ಮರಗಳ ಸಮೇತ ಮಣ್ಣು ಕುಸಿತವಾಗಿದೆ ರೈಲ್ವೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣಿನ ಗುಡ್ಡ,ಕಲ್ಲು ಬಂಡೆ ಬಿದ್ದಿದೆ.

ಹಾಸನ ಜಿಲ್ಲೆ ಬಾಳ್ಳುಪೇಟೆ ಬಳಿ ಭೂಕುಸಿತ: ಮಂಗಳೂರು ರೈಲ್ವೆ ಮಾರ್ಗ ಬಂದ್ Read More

ರಾಜಾ ಕಾಲುವೆ ಮೇಲೆ‌ ಕಟ್ಟಿದ್ದ ಕಟ್ಟಡ ತೆರವು

ಮೈಸೂರು: ರಾಜಾ ಕಾಲುವೆಯನ್ನೆ ಆಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಕಟ್ಟಡವನ್ನ ತಾಲೂಕು ಆಡಳಿತ ತೆರವು ಗೊಳಿಸಿತು.

ಅಕ್ರಮ ಕಟ್ಟಡದ ಬಗ್ಗೆ ಆರ್.ಟಿ.ಐ
ಕಾರ್ಯಕರ್ತ ಬಿ.ಎನ್.ನಾಗೇಂದ್ರ ನೀಡಿದ ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲಿ ಸಿದ ತಹಸೀಲ್ದಾರ್ ಮಹೇಶ್ ಕುಮಾರ್ ಕಟ್ಟಡವನ್ನ ತೆರುವುಗೊಳಿಸಿದ್ದಾರೆ.

ಮೈಸೂರಿನ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂ.4ರ ಕೆ.ಸಿ.ಬಡಾವಣೆಯಲ್ಲಿ ಹಾದು ಹೋಗಿರುವ ರಾಜಾಕಾಲುವೆಯನ್ನು ಆಕ್ರಮಿಸಿಕೊಂಡು ಚಂದ್ರಶೇಖರ್ ಎಂಬಾತ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಲ್ಲದೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆದಿದ್ದರು.

ಜೆಸಿ ನಗರ ನಿವೇಶನ ಸಂಖ್ಯೆ 309/1 ರ ಹೆಸರಿನಲ್ಲಿ ವಲಯ ಕಚೇರಿ 1ರಲ್ಲಿ ಕಂದಾಯ ಪಾವತಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಸಿ ಬಡಾವಣೆಯಲ್ಲಿ ರಾಜಾಕಾಲುವೆ ಮತ್ತು ಬಫರ್ ಜೋನ್ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು.

ಆರ್ ಟಿ ಐ ಮೂಲಕ ಈ ಬಗ್ಗೆ ಮಾಹಿತಿ ಪಡೆದ ಬಿ.ಎನ್.ನಾಗೇಂದ್ರ ತಹಸೀಲ್ದಾರ್ ರವರಿಗೆ ಲಿಖಿತ ದೂರು ನೀಡಿದ್ದರು.

ರಾಜಾ ಕಾಲುವೆ ಮೇಲೆ‌ ಕಟ್ಟಿದ್ದ ಕಟ್ಟಡ ತೆರವು Read More

ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸಾರಿದ ಕಾಂಗ್ರೆಸ್

ಮೈಸೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್  ಹೋರಾಟ ನಡೆಸುತ್ತಿರುವಾಗಲೇ ಕಾಂಗ್ರೆಸ್ ನವರು ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸೇರಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮೂಡ ಹಗರಣ ವಿಚಾರ ಮುಂದಿಟ್ಟುಕೊಂಡು ಬಿಜೆಪಿ,ಜೆಡಿಎಸ್ ಪಾದಯಾತ್ರೆ ಮಾಡುತ್ತಿವೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಜನಾಂದೋಲನ ಹಮ್ಮಿಕೊಂಡು,ಸಮಾವೇಶ ನಡೆಸಿ,ಶಕ್ತಿ ಪ್ರದರ್ಶನ ಮಾಡಿದೆ.

ಶುಕ್ರವಾರ ಸಮಾರೋಪ ಮೈಸೂರಿನಲ್ಲಿ ನಡೆಯುತ್ತಿದ್ದು, ಜೆಡಿಎಸ್ ವಿರುದ್ಧ  ಪ್ಲೆಕ್ಸ್ ಹಾಕುವ ಅವರ ಬಣ್ಣ ಬಯಲು ಮಾಡಿದೆ.

ನಗರದ ಹಲವೆಡೆ ಕಾಂಗ್ರೆಸ್ ನವರು ಜೆಡಿಎಸ್ ವಿರುದ್ಧ ಪ್ಲೆಕ್ಸ್ ಗಳನ್ನು ಹಾಕಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಅದರಲ್ಲೂ ದೇವೇಗೌಡರ ಕುಟುಂಬದವರು ಮೂಡ ನಿವೇಶನ ಪಡೆದಿದ್ದಾರೆಂದು ಪ್ಲೆಕ್ಸ್ ಗಳನ್ನು ಸಮಾವೇಶದ ಸ್ಥಳ ಸೇರಿದಂತೆ‌ ಅನೇಕ ಕಡೆ ಹಾಕಲಾಗಿದೆ.

ಇದನ್ನು ವಿರೋಧಿಸಿ ಬೆಳಿಗ್ಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ  ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸಾರಿದ ಕಾಂಗ್ರೆಸ್ Read More

ತುಂಗಭದ್ರಾ ಜಲಾಶಯದ 19 ನೇ ಗೇಟ್​​ ಚೈನ್ ಲಿಂಕ್ ಕಟ್:ಅಪಾರ ನೀರು ವೇಸ್ಟ್

ಕೊಪ್ಪಳ: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19 ನೆ ನಂಬರ್‌ ಗೇಟ್​​ನ ಚೈನ್ ಲಿಂಕ್ ತುಂಡಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆ ಚೈನ್ ಲಿಂಕ್ ತುಂಡಾಗಿ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದೆ.ಈ ಭಾಗದ ಬೆಳೆಗಳಿಗೂ ಹಾನಿಯಾಗಿದೆ.

ಅಪಾರ ಪ್ರಮಾಣದ ನೀರು ಹೊರಬರುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಿಗೆ ಮಾತ್ರವಲ್ಲದೇ ನೆರೆಯ ಆಂಧ್ರ, ತೆಲಂಗಾಣ ‌ರಾಜ್ಯಗಳ ಪಾಲಿನ ಜೀವನಾಡಿಯಾದ ತುಂಗಭದ್ರ ಜಲಾಶಯದಿಂದ ನೀರು ಹರಿದು ಹೋಗುತ್ತಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ತಡ ರಾತ್ರಿಯೇ ಬೆಂಗಳೂರಿಂದ ಮುನಿರಬಾದ್ ಗೆ ಆಗಮಿಸಿದ‌ ಸಚಿವ ತಂಗಡಗಿ ಜಲಾಶಯವನ್ನು ಪರಿಶೀಲನೆ ನಡೆಸಿದ್ದಾರೆ.‌

19 ಗೇಟ್ ದುರಸ್ಥಿಗಾಗಿ ಡ್ಯಾಂ ನಲ್ಲಿರುವ ಕನಿಷ್ಠ 60 ಟಿಎಂಸಿ ನೀರು ಖಾಲಿ ಅನಿವಾರ್ಯ ಎಂದು ಇಂಜಿನಿರುಗಳು ಹೇಳಿದ್ದಾರೆ.‌ ತುಂಗಭದ್ರಾ ಜಲಾಶಯದ‌ 19ನೇ ಗೇಟ್ ರಿಪೇರಿ ಕುರಿತು ಚರ್ಚಿಸಲು ಬೆಂಗಳೂರು, ಹೈದರಾಬಾದ್ ನಿಂದ ತಜ್ಞರನ್ನು ಕರೆಸಲಾಗುತ್ತಿದೆ.

ತುಂಗಭದ್ರಾ ಜಲಾಶಯದ 19 ನೇ ಗೇಟ್​​ ಚೈನ್ ಲಿಂಕ್ ಕಟ್:ಅಪಾರ ನೀರು ವೇಸ್ಟ್ Read More

ಯುವ ಡಿವೋರ್ಸ್‌ ಪ್ರಕರಣ ಆ. 23ಕ್ಕೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌ ಸಲ್ಲಿಸಿದ್ದ ವಿಚ್ಚೇದನ ಅರ್ಜಿ ವಿಚಾರಣೆಯನ್ನು ಆಗಸ್ಟ್‌ 23ಕ್ಕೆ ಮುಂದೂಡಲಾಗಿದೆ.

ಗುರುವಾರ 1ನೆ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಅವರಿದ್ಧ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಈ ವೇಳೆ ವಿಚ್ಚೇದನ ಅರ್ಜಿಗೆ ಯುವ ಪತ್ನಿ ಶ್ರೀದೇವಿ ಭೈರಪ್ಪ ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಮನವಿಗೆ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾಗಿರುವ ಕಾರಣ ಮಿಡಿಯೇಷನ್ ಕೌನ್ಸಿಲಿಂಗ್ ಮುಕ್ತಾಯವಾಗಲಿ. ಮೊದಲು ಕೌನ್ಸಿಲಿಂಗ್‌ ಮುಕ್ತಾಯವಾಗಬೇಕು ಎಂದು ಹೇಳಿದರು.

ಯುವ ಡಿವೋರ್ಸ್‌ ಪ್ರಕರಣ ಆ. 23ಕ್ಕೆ ಮುಂದೂಡಿಕೆ Read More

ಆ. 14ರ ತನಕ ದರ್ಶನ್‌ ಅಂಡ್ ಗ್ಯಾಂಗ್ ಗೆ ಜೈಲೇ ಗತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ  ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್‌ ನ  ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಆಗಸ್ಟ್‌ 14 ರವರೆಗೆ ವಿಸ್ತರಿಸಿ ಆದೇಶಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್‌ಗೆ ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಹಾಗೂ ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲಾಗಿತ್ತು.

ದರ್ಶನ್, ಪವಿತ್ರಾಗೌಡ, ಪವನ್, ಪ್ರದೂಷ್, ವಿನಯ್, ದೀಪಕ್ ಸೇರಿ 17 ಮಂದಿಯ  ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್‌ಐಟಿ ನ್ಯಾಯಾಧೀಶರ ಮುಂದೆ ರಿಮ್ಯಾಂಡ್‌ ಕಾಪಿಯನ್ನು ಸಲ್ಲಿಸಿ ಮನವಿ ಮಾಡಿತ್ತು.

ಆ. 14ರ ತನಕ ದರ್ಶನ್‌ ಅಂಡ್ ಗ್ಯಾಂಗ್ ಗೆ ಜೈಲೇ ಗತಿ Read More