96ನೇ ಅಥ್ಲೆಟಿಕ್ಸ್: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಸಾಧನೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು 96ನೇ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರು ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

400 ಮೀಟರ್ ಓಟದಲ್ಲಿ ಮತ್ತು 800 ಮೀಟರ್ ಓಟದಲ್ಲಿ ತೃತೀಯ ಬಿ ಎಸ್ ಸಿ ವಿದಯಾರ್ಥಿನಿ
ಲಕ್ಷ್ಮಿ ಕೆ ಎಸ್ ತೃತೀಯ ಸ್ಥಾನ, ಸಿಂಚನ ಎಂ ಎಸ್ ಹೆಪಟ್ಲಾತಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಗುಂಡು ಎಸೆತ ಸ್ಪರ್ಧೆಯಲ್ಲಿ, ಜುಡಿತ ಜೆ.ಆರ್ ದ್ವಿತೀಯ ಸ್ಥಾನ,ತೇಜಶ್ರೀ ಹೆಚ್.ಎಂ 20 ಕಿಲೋ ಮೀಟರ್ ವಾಕಿಂಗ್ ಸ್ಪರ್ಧೆಯಲ್ಲಿ ಎಂಟನೇ ಸ್ಥಾನವನ್ನು ಪಡೆದಿದ್ದಾರೆ.

ಗೆಲುವು ಸಾಧಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ರಹಿಮಾನ್ ಎಂ. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರತಿಮಾ ಕೆ ಆರ್ ಹಾಗೂ ಕ್ರೀಡಾ ಸಮಿತಿಯ ಸದಸ್ಯರು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರರು ಅಭಿನಂದಿಸಿದರು.