ಮೈಸೂರು: ಪಹಲ್ಗಾಮ್ ಉಗ್ರರ ಅಟ್ಟಹಾಸದಿಂದ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಚಾಮುಂಡಿಪುರಂ ಅಂದಾನಿ ಸರ್ಕಲ್ ನಲ್ಲಿ
ಮೇಣದ ಬತ್ತಿ ಬೆಳಗಿಸಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯಮಾ. ವಿ
ರಾಮ್ ಪ್ರಸಾದ್, ಸಂಸ್ಥೆಯ ಗೌರವ ಅಧ್ಯಕ್ಷರಾದ ಲಕ್ಷ್ಮೀಶ, ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ರವಿಶಂಕರ್, ಖಜಾಂಚಿ ಮನೋಹರ್, ನಿರ್ದೇಶಕರುಗಳಾದ ರಾಜಣ್ಣ, ವಿಜಯ ವಿಠಲಾಚಾರ್ಯ, ಗುರುರಾಜ್, ಶರ್ಮಾ, ಪ್ರಸನ್ನ ಕುಮಾರ್, ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.
