ಅರುಣೋದಯ ವಿಶೇಷ ಶಾಲೆ ಮಕ್ಕಳಿಗೆ ನೇತ್ರ ತಪಾಸಣೆ ಶಿಬಿರ

Spread the love

ಮೈಸೂರು: ಚಾಮುಂಡಿಪುರಂನಲ್ಲಿರುವ ಅರುಣೋದಯ ವಿಶೇಷ ಶಾಲೆಯಲ್ಲಿ ಹೊಸ ವರ್ಷದ ಅಂಗವಾಗಿ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್ ಅವರು ಅನ್ನಪೂರ್ಣ ಐ ಆಸ್ಪತ್ರೆ ಸಹಯೋಗದಲ್ಲಿ
ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು.

ಈ‌ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು, ಕ್ಯಾಲೆಂಡರ್ ಹೊಸ ವರ್ಷದ ದಿನದಂದು ವಿಶೇಷ ಮಕ್ಕಳಿಗೆ ಬೆಳಕು ನೀಡುವ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ಮಾಜಿ ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಅವರ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ವಿಶೇಷ ಮಕ್ಕಳನ್ನು ದೇವರ ಮಕ್ಕಳಂತೆ ಆರೈಕೆ ಮಾಡುತ್ತಾ, ಪೋಷಿಸುತ್ತಿರುವ ಅರುಣೋದಯ ವಿಶೇಷ ಶಾಲೆಯ ಸೇವೆ ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.

ವಿಶೇಷ ಮಕ್ಕಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಆರೈಕೆ ಮಾಡಿ ಪೋಷಿಸುತ್ತಿರುವ ಸಂಸ್ಥೆಯ ಕಾರ್ಯ ಇತರರಿಗೂ ಪ್ರೇರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶೇಷ ಚೇತನರೊಂದಿಗೆ ಸಮಾಜ ಹೊಂದ ಬೇಕಾದ ಕನಿಷ್ಠ ಸೌಜನ್ಯ, ಸಂವೇದನಾಶೀಲತೆ ಕುರಿತು ಅರಿವು ಮೂಡಿಸುವುದು ಅತ್ಯಗತ್ಯ ಎಂದು ಡಿ.ಟಿ.ಪ್ರಕಾಶ್ ನುಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ,ವಿಶೇಷ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಮನೆಯಲ್ಲಿ ಒಂದು ವಿಶೇಷ ಚೇತನ ಮಗುವಿದ್ದರೇ ನೋಡಿಕೊಳ್ಳುವುದು ಕಷ್ಟ. ಆದರೆ ನಮ್ಮ ಈ ಸಂಸ್ಥೆ ನೂರಾರು ಮಕ್ಕಳ ಪೋಷಣೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಇದು ನಿಜಕ್ಕೂ ದೇವರ ಸೇವೆ ಮಾಡಿದಂತೆಯೇ, ಇಲ್ಲಿ ಕೆಲಸ ಮಾಡುವ ಶಿಕ್ಷಕಿಯರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಈ ವಿಶೇಷ ಚೇತನ ಮಕ್ಕಳ ಪಾಲನೆ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ನುಡಿದು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಬಿಜೆಪಿ ಮುಖಂಡರಾದ ರಮೇಶ್, ಸಂತೋಷ್ (ಶಂಭು), ಮಂಜುನಾಥ್, ಹೇಮಂತ್, ಬೈರತಿ ಲಿಂಗರಾಜು ಮತ್ತಿತರರು ಹಾಜರಿದ್ದರು.