ಮೈಸೂರು: ಆರ್ಟ್ ಆಫ್ ಲಿವಿಂಗ್ ಮಕ್ಕಳು
2024ರ ಕ್ಯಾಲೆಂಡರ್ ನಲ್ಲಿ ಪೇಪರ್ ಬ್ಯಾಗ್ ತಯಾರಿಸಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು.
ಆರ್ಟ್ ಆಫ್ ಲಿವಿಂಗ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ನಂಜು ಮಳಿಗೆ ಮಾರ್ಕೆಟ್ ಸುತ್ತಮುತ್ತ 2024ರ ಕ್ಯಾಲೆಂಡರ್ ನಲ್ಲಿ ಆರ್ಟ್ ಆಫ್ ಲಿವಿಂಗ್ ಮಕ್ಕಳೆ ಸಿದ್ದಪಡಿಸಿದ ಪೇಪರ್ ಬ್ಯಾಗನ್ನು ನೀಡಿ ಪ್ಲಾಸ್ಟಿಕ್ ನಿಂದ ಆಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು.
ಪ್ಲಾಸ್ಟಿಕ್ ಬೇಡ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್ ಬಳಸಿ ಎಂದು ಘೋಷಣೆ ಕೂಗಿ ಗ್ರಾಹಕರಿಗೆ ಪೇಪರ್ ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ನಗರಪಾಲಿಕ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ ಆರ್ಟ್ ಆಫ್ ಲಿವಿಂಗ್ ಮಕ್ಕಳು ಪೇಪರ್ ಬ್ಯಾಗನ್ನು ಸ್ವಯಂ ಪ್ರೇರಿತರಾಗಿ ತಯಾರಿಸಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಅತ್ಯುತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2024ರ ಹಳೆ ಕ್ಯಾಲೆಂಡರ್ ಹಾಗೂ ದಿನಪತ್ರಿಕೆಗಳನ್ನು ಬೀಸಾಡದೇ ಈ ರೀತಿ ಬಳಕೆ ಮಾಡುವ ಮೂಲಕ ಸುತ್ತಮುತ್ತಲ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಪ್ರತಿ ಮೊಹಲ್ಲಾ ದಲ್ಲೂ ನಗರ ಪಾಲಿಕೆ ವತಿಯಿಂದ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಲಿ ಎಂದು ಮ ವಿ ರಾಮಪ್ರಸಾದ್ ಸಲಹೆ ನೀಡಿದರು.

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷೆ ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಹಿರಿಯ ಪತ್ರಕರ್ತ ಅನಿಲ್ ಕುಮಾರ್, ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಶಂಕರ್, ಶಿವಲಿಂಗ ಸ್ವಾಮಿ ಮತ್ತು
ಆರ್ಟ್ ಆಫ್ ಲಿವಿಂಗ್ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರಾದ ನಂದಿನಿ, ವಿವೇಕ್ ಹಾಜರಿದ್ದರು.