ಮೈಸೂರು: ಮೈಸೂರಿನ ಅರಿವು ಸಂಸ್ಥೆಯು ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ನಂಜುಮಳಿಗೆ ವೃತ್ತದ ಬಳಿ ಇರುವ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಉಚಿತವಾಗಿ ಮಂಗಳೂರು ಸೌತೆಕಾಯಿ ಮತ್ತು ತರಕಾರಿಗಳನ್ನು ವಿತರಿಸಿ ಮಾದರಿಯಾಗಿದ್ದಾರೆ.
ಇತ್ತೀಚೆಗೆ ರೈತರು ಬೆಳೆದ ತರಕಾರಿಗಳು, ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಕಷ್ಟಪಟ್ಟು ದುಡಿದರೂ ಕಷ್ಟಪಡುತ್ತಿರುವ ಕಾರಣ ಭಕ್ತರಿಗೆ ಉಚಿತವಾಗಿ ಮಂಗಳೂರು ಸೌತೆಕಾಯಿ, ತರಕಾರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ರೈತರ ಒಂದೇ ಬೆಳೆಯನ್ನು ಬೆಳೆಯದೆ ಪಂಚ ತರಂಗಿಣಿ ಬೆಳೆಗಳನ್ನು ಅಳವಡಿಸಿ ಅತಿಯಾದ ರಾಸಾಯನಿಕಗಳನ್ನು ಉಪಯೋಗ ಮಾಡದೆ ಸಾವಯವ ಕೃಷಿಯ ಮೂಲಕ ಭೂಮಿಯ ಫಲವತ್ತತೆ ಹಾಳಾಗದಂತೆ ನಿಗಾ ವಹಿಸಬೇಕೆಂದು ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಅವರು ತಿಳಿಸಿದರು.
ರೈತರು ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಹೆಚ್ಚು ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಶ್ರೀಕಾಂತ್ ಕಶ್ಯಪ್ ಸಲಹೆ ನೀಡಿದರು.
ಈ ವೇಳೆ ದೇವಸ್ಥಾನದ ಮುಖಂಡರು, ಭಕ್ತರು ಹಾಜರಿದ್ದರು.
