ಮೈಸೂರು: ಅಪೂರ್ವ ಸ್ನೇಹ ಬಳಗದ ವತಿಯಿಂದ ನಗರದ ಚಾಮುಂಡಿಪುರಂನಲ್ಲಿ ಮನೆ ಮನೆಗೆ ತೆರಳಿ ಹಣತೆ ವಿತರಿಸಿ ಪಟಾಕಿಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಮೂಲಕ ದೀಪಾವಳಿ ಆಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್
ದೀಪಾವಳಿ ಹಬ್ಬವನ್ನು ದೀಪಗಳನ್ನು ಬೆಳಗಿಸುವ ಮೂಲಕ ಮಾಲಿನ್ಯ ರಹಿತವಾಗಿ ಆಚರಿಸೋಣ ಎಂದು ಮನವಿ ಮಾಡಿದರು.
ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಪಟಾಕಿಯಿಂದ ಉಂಟಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪೌರಕಾರ್ಮಿಕರಿಗೆ ದೊಡ್ಡ ಸವಾಲು ಎಂದು ಹೇಳಿದರು.
ಪಟಾಕಿ ಸಿಡಿಸುವ ಬದಲು ರಂಗೋಲಿ ಹಾಕಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದಲ್ಲಿ ಪ್ರಾಣಿ ಸಂಕುಲಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಇರುವುದಿಲ್ಲ. ಯುವಪೀಳಿಗೆ ಹಸಿರು ದೀಪಾವಳಿ ಆಚರಿಸುವ ಪಣ ತೊಡಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ನಿರ್ದೇಶಕರಾದ ಎಚ್ ವಿ ಭಾಸ್ಕರ್ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮಹಾನ್ ಶ್ರೇಯಸ್, ಆನಂದ್, ಆದರ್ಶ್, ಜಯರಾಮ್, ಮೈ ಲಾ ವಿಜಯ್ ಕುಮಾರ್, ರಕ್ಷಿತ್, ದೂರ ರಾಜಣ್ಣ, ಸಿದ್ದಲಿಂಗ ಸ್ವಾಮಿ, ಮತ್ತಿತರರು ಹಾಜರಿದ್ದರು.


 
                     
                    