ನಾಳೆ ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಜಿ ಪ್ರಾಂತ್ಯ 2 ರ ಪ್ರಾಂತೀಯ ಸಮ್ಮೇಳನ

Spread the love

ಮೈಸೂರು,ಏ.7: ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಜಿ ಪ್ರಾಂತ್ಯ 2 ರ ಪ್ರಾಂತೀಯ ಸಮ್ಮೇಳನ ಏ.8 ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ ಜೆಪಿ ನಗರ ಬಿಲ್ಡರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತೀಯ ಅಧ್ಯಕ್ಷ ಲಯನ್ ಕೆ ಆರ್ ಭಾಸ್ಕರನಂದಾ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಕಬ್ಬಿನಾಲೆ ವಸಂತ್ ಭಾರದ್ವಾಜ್ ,ಮುಖ್ಯ ಭಾಷಣಕಾರರಾಗಿ ಡಾಕ್ಟರ್ ಕೆ. ಹರೀಶ್,ಡಾ.ಮೋನಿಕಾ ಭಾಸ್ಕರ್ , ಕೆ.ದೇವೇಗೌಡ, ಅತಿಥೇಯ ಸಮಿತಿಯ ಸಲಹೆಗಾರರಾದ ಡಾ. ಎನ್ ಕೃಷ್ಣೆಗೌಡ ,ಅಧ್ಯಕ್ಷರಾದ ಮಕಾಳ ಶಿವಕುಮಾರ್, ಮೆಂಟರ್ ಲಯನ್ ಟಿ ಎಚ್ ವೆಂಕಟೇಶ್, ವಲಯ ಅಧ್ಯಕ್ಷರಾದ ಶ್ರೀಕಾಂತರಾಜು ,ಲಯನ್ ಡಾ.ಮೈತ್ರೆಯಿ, ಕಾರ್ಯದರ್ಶಿ ಲಯನ್ ಎನ್ ರವಿ ಕುಮಾರ್, ಖಜಾಂಚಿ ಲಯನ್ ಜಯಪ್ರಕಾಶ್ ಭಾಗವಹಿಸುವರು.

ಪ್ರಾಂತ್ಯ 2ರ ಎಲ್ಲಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವರು ಎಂದು ಲಯನ್ ಸಿ.ಆರ್ .ದಿನೇಶ್ ತಿಳಿಸಿದ್ದಾರೆ.