ಮೈಸೂರು: ನಟಸಾರ್ವಭೌಮ ಡಾ.ರಾಜಕುಮಾರ್ ಅವರ ದೊಡ್ಡ ಮಗಳು ಲಕ್ಷ್ಮಿ ಗೋವಿಂದರಾಜು ಅವರ ಪುತ್ರ
ಷಣ್ಮುಖ ಗೋವಿಂದರಾಜ್ ನಟಿಸಿರುವ
ನಿಂಬಿಯ ಬನಾದ ಮ್ಯಾಗ ಚಲನಚಿತ್ರವು ಏಪ್ರಿಲ್ 1ರಂದು ತೆರೆಗೆ ಬರಲಿದೆ.
ಇಂದು ಖಾಸಗಿ ಹೋಟೆಲಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡವು ಚಲನಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.
ನಾಯಕ ನಟ ಷಣ್ಮುಖ ಗೋವಿಂದರಾಜ್ ಮಾತನಾಡಿ, ಸಿನಿಮಾ ಮಾಡಲು ಇಷ್ಟವಿದ್ದರೂ ನನ್ನನ್ನು ಹಾಕಿಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ, ತಂದೆ ತಾಯಿ ಸಹ ಇದರ ಬಗ್ಗೆ ನನ್ನನ್ನು ಕೇಳಲಿಲ್ಲ, ನಾನೊಂದು ಕಂಪನಿಯಲ್ಲಿ ಉದ್ಯೋಗಿಯಾಗಿದ್ದೆ ನನ್ನನ್ನು ನಿರ್ಮಾಪಕರಾದ ಮಹಾದೇಶ ಹಾಗೂ ನಿರ್ದೇಶಕರಾದ ಅಶೋಕ್ ಕಡಬ ಅವರು ನನ್ನನ್ನು ಸಂಪರ್ಕಿಸಿ ನಿಮಗಾಗಿ ಒಂದು ಚಿತ್ರಕಥೆ ಇದೆ ದಯವಿಟ್ಟು ನೀವೇ ಅದರಲ್ಲಿ ನಾಯಕ ನಟನ ಪಾತ್ರ ಮಾಡಬೇಕು ಎಂದು ಕೇಳಿಕೊಂಡರು ಎಂದು ಹೇಳಿದರು.
ತಂದೆ ತಾಯಿಯನ್ನು ಒಪ್ಪಿಸಿ ಚಿತ್ರಕಥೆ ಕೇಳಿದಾಗ ನಟಿಸಲು ಒಪ್ಪಿಗೆ ಕೊಟ್ಟರು, ಇದೊಂದು ಸುಂದರ ಸಂಸಾರಿಕ ಚಿತ್ರವಾಗಿದ್ದು ತಂದೆ ತಾಯಿ ಮಗನ ಸುತ್ತ ಹೆಣದ ಕಥೆಯಾಗಿದೆ, ಸುಂದರವಾದ ನಾಲ್ಕು ಹಾಡುಗಳು ಮೂಡಿಬಂದಿವೆ ಎಂದು ತಿಳಿಸಿದರು.
ತಾತ ರಾಜಕುಮಾರ್, ಶಿವಣ್ಣ, ರಾಘಣ್ಣ ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತೇನೆ ಎಂದು ಷಣ್ಮುಖ ಹೇಳಿದರು.
ಮತ್ತೊಬ್ಬ ನಾಯಕ ನಟ ಸುನಾದ್ ರಾಜ್ ಮಾತನಾಡಿ, 93 ರಲ್ಲಿ ಮೇಘಮಾಲೆ ಚಿತ್ರದಲ್ಲಿ ನಟಿಸಿ ನಂತರ ಕೆಲ ಸಿನಿಮಾಗಳಲ್ಲಿ ನಟನೆ ಮಾಡಿ,ನಂತರ ಬಿಜಿನೆಸ್ ಕಡೆಗೆ ತೊಡಗಿಸಿಕೊಂಡೆ ಎಂದು ತಿಳಿಸಿದರು.
ಒಂದು ಯೂಟ್ಯೂಬ್ ಸಂದರ್ಶನದಲ್ಲಿ ಇಂಟರ್ವ್ಯೂ ಕೊಟ್ಟಾಗ ಅದರಲ್ಲಿ ಸುಮಾರು ಕಮೆಂಟ್ ಗಳು ಬಂದವು, ಸರ್ ನೀವು ಯಾಕೆ ಪುನಃ ನಟನೆ ಮಾಡಬಾರದು ಎಂದು ಕೇಳಿದರು,ನನ್ನ ಮಗಳ ಮುಂದೆ ಬಣ್ಣ ಹಚ್ಚಬೇಕೆಂದು ಪುನಃ ಸಿನಿಮಾದಲ್ಲಿ ನಟಿಸಿದೆ. ಈ ಚಿತ್ರದಲ್ಲಿ ಮೊದಲನೇ ಶಾಟ್ ಎದುರಿಸಿದಾಗ ನನಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ 25 ವರ್ಷದ ಹಿಂದೆ ಹೇಗೆ ನಡೆಸಿದ್ದೇನೋ ಹಾಗೆ ನಟಿಸಿದೆ ಎಂದು ತಿಳಿಸಿದರು.
ಕರ್ನಾಟಕದ 70 ಸಿನಿಮಾ ಮಂದಿರದಲ್ಲಿ ನಿಂಬಿಯ ಬನಾದ ಮ್ಯಾಗ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
ನಿರ್ಮಾಪಕ ಮದೇಶ್ ಅವರು ಮಾತನಾಡಿ ಸಿನಿಮಾ ಸುಮಾರು ಒಂದು ಕೋಟಿ ಬಜೆಟ್ ನದ್ದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ಎಸ್.ಎ ಶ್ರೀನಿವಾಸ್, ಸುನಾದ್ ರಾಜ್, ಸಂದೀಪ್ ಮಲಾನಿ ಮತ್ತಿತರರು ಉಪಸ್ಥಿತರಿದ್ದರು.