
ಮೈಸೂರು: ಪುನೀತ್ ರಾಜಕುಮಾರ್ ಅವರ ಮೂರನೆ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದ ಲಲಿತಮಹಲ್ ಪ್ಯಾಲೇಸ್ ಮುಖ್ಯ ರಸ್ತೆ ಸಮೀಪ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕರ್ನಾಟಕ ಯುವ ರಕ್ಷಣ ವೇದಿಕೆ, ಬೀದಿಬದಿ ವ್ಯಾಪಾರಿ ಸಂಘ ದವರು ಮತ್ತು ಅಪ್ಪು ಅಭಿಮಾನಿಗಳು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಪುನೀತ್ ರಾಜಕುಮಾರ್ ಅವರ ದೊಡ್ಡ ಭಾವಚಿತ್ರ ಇಟ್ಟು ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.

ನಂತರ ನೂರಾರು ಮಂದಿ ಆಗಮಿಸಿ ಅಪ್ಪುಭಾವಚಿತ್ರಕ್ಕೆ ನಮಿಸಿ ಗುಣಗಾನ ಮಾಡಿದರು.ನಂತರ ಅನ್ನಪ್ರಸಾದ ಸ್ವೀಕರಿಸಿದರು.
