ಮೈಸೂರು: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ವಿಧಿವಶರಾಗಿ ಇಂದಿಗೆ ನಾಲ್ಕು ವರ್ಷಗಳು ಕಳೆದಿವೆ,ಆದರೆ ಅವರು ಅಜರಾಮರ ಎಂದು ಅಭಿಮಾನಿಗಳು ನಂಬಿದ್ದಾರೆ.ಅದಕ್ಕಾಗಿ ಅವರನ್ನು ಒಂದೊಂದು ರೀತಿಯಲ್ಲಿ ಸ್ಮರಿಸುತ್ತಾರೆ.
ಅದೇ ರೀತಿ ಮೈಸೂರಿನ
ಚಾಮುಂಡಿಪುರಂ ವೃತ್ತದಲ್ಲಿ ಸಂದೀಪ್ ಸ್ನೇಹ ಬಳಗದ ವತಿಯಿಂದ ಡಾ|| ಪುನೀತ್ ರಾಜಕುಮಾರ್ ರವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮೇಣದ ಬತ್ತಿ ಮುಖಾಂತರ ದೀಪ ಬೆಳಗಿಸಿ ಗೌರವ ನಮನ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಸಿ ಸಂದೀಪ್, ಅಂಬಳೆ ಶಿವಣ್ಣ, ಮಹೇಶ್, ಮರಿಸ್ವಾಮಿ, ಬಸವಣ್ಣ, ಪುರುಷೋತ್ತಮ್, ಬಸವರಾಜ್, ಲಕ್ಷ್ಮಣ್, ಮಹದೇವಪ್ಪ,ನಿರಂಜನ್, ವಿವೇಕ್, ಮಧು , ನಾಗರಾಜ್, ರಾಜೇಂದ್ರ, ಸುರೇಶ್, ಸಂತೋಷ್, ನಾರಾಯಪ್ಪ , ಧನುಷ್, ಸುರೇಂದರ್, ಮಂಜು, ಮಹೇಶ್, ಹವನ್, ಪ್ರಣವ್, ಅಭಿನವ್ ಅವರುಗಳು ಅಪ್ಪುವಿಗೆ ನಮನ ಸಲ್ಲಿಸಿ ಅವರನ್ನು ಸ್ಮರಿಸಿದರು.

