ಮೈಸೂರು: ನಗರದ ಶ್ರೀರಾಂಪುರ, ಶಿವನ ದೇವಸ್ಥಾನದ ಬಳಿ ಇರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಹಣ್ಣು, ಹಂಪಲು ದಿನಸಿ ಸಾಮಗ್ರಿ ವಿತರಿಸಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್,
ಕನ್ನಡ ಸಿನಿಮಾರಂಗದ ಮೇರು ಪ್ರತಿಭೆ ಅಪ್ಪು ಅವರ ಸಮಾಜ ಮುಖಿ ಚಿಂತನೆ ಎಲ್ಲರಿಗೂ ಮಾದರಿ ಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್ ಅವರು ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬೆಳಕು ವಾತ್ಸಲ್ಯ ದಾಮದ ಮಂಗಳ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಛಾಯಾ,
ಗಾಯಕ ಯಶ್ವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ಮಹದೇವ್ ಸ್ವಾಮಿ,ದತ್ತ, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.