ಮೈಸೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ. ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಇಲವಾಲ ಹೋಬಳಿ ವತಿಯಿಂದ ಮೊನ್ನೆ ಬೃಹತ್ ಪ್ರತಿಭಟನೆ ನಡೆಸಲಾಯಿತು
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಮಾತನಾಡಿ,ಅಮಿತ್ ಶಾ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ತವರು ರಾಜ್ಯ ಗುಜರಾತ್ ನಿಂದ ಗಡಿಪಾರು ಆಗಲು ಮೂಲ ಕಾರಣ ಈ ದೇಶದ ಸಂವಿಧಾನ, ಈ ದಿನ ಅವರು ನಮ್ಮ ರಾಷ್ಟ್ರದ ಗೃಹ ಸಚಿವರಾಗಿರುವುದು ಕೂಡ ಆಬೇಡ್ಕರ್ ಅವರು ಬರೆದಂತಹ ಸಂವಿಧಾನದಿಂದ ಎಂಬುದನ್ನು ಮರೆಯಬಾರದು ಎಂದು ಒಕ್ಕೂಟದವರು ಹೇಳಿದರು.
ಈ ದೇಶ ಧರ್ಮ ಅಥವಾ ದೇವರ ಭಕ್ತಿಯಿಂದ ನಡೆಯುವುದಿಲ್ಲ, ಬದಲಾಗಿ ಅಂಬೇಡ್ಕರ್ ರವರ ಸಂವಿಧಾನದಿಂದ ನಡೆಯುತ್ತದೆ ಎಂಬುದನ್ನು ಯಾರೂ ಕೂಡಾ ಮರೆಯಬಾರದು ಎಂದು ಎಚ್ಚರಿಸಿದರು.
ಅಂಬೇಡ್ಕರ್ ರವರು ದೇಶದ ಶಕ್ತಿ ಇಡೀ ದೇಶದ ಅಡಿಪಾಯ ಅವರು ರಚಿಸಿದ ಸಂವಿಧಾನದ ಮೇಲೆ ನಿಂತಿದೆ.
ಅಂತಹ ಮಹಾನ್ ಶಕ್ತಿಯ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ಸಂವಿಧಾನ ಆಗೌರವಿಸುವುದು, ಅದರ ಬಗ್ಗೆ ಯಾವೊಬ್ಬ ವ್ಯಕ್ತಿಗೂ ಮಾತನಾಡುವ ನೈತಿಕತೆ ಇಲ್ಲ, ಆಸ್ಪೃಶ್ಯರು, ದಲಿತರು, ಶೋಷಿತರು ಬಾಬಾ ಸಾಹೇಬ ಅಂಬೇಡ್ಕರವರ ಸಿದ್ಧಾಂತಗಳಿಗೆ ತಲೆಬಾಗುವ ಎಲ್ಲಾ ಅನುಯಾಯಿಗಳು ಅಂಬೇಡ್ಕರ್ ರವರನ್ನು ದೇವರೆಂದು ಪೂಜಿಸುತ್ತಾರೆ.
ಅಂತಹವರನ್ನು ಖಂಡಿಸುವ ಅಧಿಕಾರ ಕೊಟ್ಟವರಾರು, ದೇಶದ ಬೆಳಕು ಮತ್ತು ಉಸಿರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ಅಮಾನತು ಗೊಳಿಸಿ ದೇಶ ದ್ರೋಹ ಪ್ರಕರಣ ದಾಖಲಿಸಿ, ದೇಶದಿಂದ ಗಡಿ ಪಾರು ಮಾಡಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ರಾಜ್ಯಪಾಲರ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮನವಿ ರವಾನಿಸಿದ್ದಾರೆ.
ಪ್ರತಿಭಟನೆಯಲ್ಲಿ ಹಲವಾರು ಮುಖಂಡರು, ದಲಿತ ಸಂಘರ್ಷ ಸಮಿತಿಯವರು,ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು, ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.