ಶಬರಿಮಲೆ ಭಕ್ತರಿಗಾಗಿ ಆಂಬ್ಯುಲೆನ್ಸ್ ಕೊಡುಗೆ ನೀಡಿದ ಅಪ್ಪು ಅಭಿಮಾನಿಗಳು

ಮೈಸೂರು: ಶಬರಿಮಲೆ ಭಕ್ತರಿಗಾಗಿ ಕನ್ನಡ ರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗ ವಿಶೇಷ ಕೊಡುಗೆ ನೀಡಿದೆ.

ಡಾ.ಪುನೀತ್ ರಾಜಕುಮಾರ್ ಸಂಸ್ಮರಣ ರಥಾ ಎಂಬ ಘೋಷವಾಕ್ಯದೊಂದಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿದ್ದು ಚಾಲನೆ ನೀಡಲಾಗಿದೆ.

ಕೆ.ಆರ್.ನಗರ ತಾಲೂಕು ಚಿಕ್ಕಕೊಪ್ಪಲು ಗ್ರಾಮದ ಪುನೀತ್ ಅಭಿಮಾನಿಗಳ ವತಿಯಿಂದ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತಿದೆ.

ಇಂದಿನಿಂದ ಎರಡು ತಿಂಗಳ ಕಾಲ ಪಂಪಾ ದಲ್ಲಿ ಆಂಬ್ಯುಲೆನ್ಸ್ ಶಬರಿಮಲೆ ಭಕ್ತರ ಸೇವೆಗಾಗಿ ಮುಡಿಪಾಗಿರಲಿದೆ.

ಶಬರಿಮಲೆಗೆ ಬರುವ ಭಕ್ತರು ಅನಾರೋಗ್ಯಕ್ಕೆ ತುತ್ತಾದರೆ,ನಾಪತ್ತೆಯಾದರೆ ಪತ್ತೆ ಹಚ್ಚುವ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಈ ತುರ್ತುವಾಹನ ನೆರವಾಗಲಿದೆ.

ವಾಹನದ ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಆಕರ್ಷಿಸುತ್ತಿದೆ.

ವಾಹನದ ಮೇಲೆ ಎರಡು ಸಹಾಯವಾಣಿ ನಂ(9845230909, 8277536622) ಸಹ ಪ್ರಕಟಿಸಲಾಗಿದೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಪುನೀತ್ ಅಭಿಮಾನಿಗಳು ಶಬರಿಮಲೆಗೆ ತೆರಳಿ ಆಂಬ್ಯುಲೆನ್ಸ್ ಸೇವೆ ಆರಂಭಿಸಲಿದ್ದಾರೆ.