ಮೈಸೂರು: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಯಲು ಧಾರ್ಮಿಕ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಅಂಬ್ರಾಣಿ ಗುರುಕುಲದ ಡಾಕ್ಟರ್ ಬೆ.ನಾ ವಿಜೇಂದ್ರ ಆಚಾರ್ಯ ತಿಳಿಸಿದರು.
ಮೈಸೂರಿನ ಜಯನಗರದಲ್ಲಿರುವ ಅಂಬ್ರಾಣಿ ಗುರುಕುಲದಲ್ಲಿ ನಡೆದ ವಿದ್ಯಾರ್ಥಿಗಳ ಧಾರ್ಮಿಕ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸಬಾರದು,ಅವರಲ್ಲಿ ಪಠ್ಯೇತರ ಹವ್ಯಾಸ ಬೆಳೆಸುವುದರೊಂದಿಗೆ ಅವರನ್ನು ಸಂಪತ್ತಾಗಿ ಪರಿವರ್ತಿಸಬೇಕು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ
ಶಿಬಿರದ ಮಕ್ಕಳಿಗೆ ನೋಟ್ ಬುಕ್ ಮತ್ತು ಹಣ್ಣು, ಹಂಪಲು ವಿತರಿಸಲಾಯಿತು.

ಅಂಬ್ರಾಣಿ ಗುರುಕುಲದ ಡಾ. ಬೆ. ನಾ ವಿಜಯೇಂದ್ರ ಆಚಾರ್ಯ, ಸರಿಯೋ ವಿಜಯೇಂದ್ರ ಆಚಾರ್ಯ,ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಬಿ.ಜೆ.ಪಿ. ಕೆ.ಆರ್. ಕ್ಷೇತ್ರದ ಕಾರ್ಯದರ್ಶಿ ಬೈರತಿ ಲಿಂಗರಾಜು, ಹಿರಿಯ ಕ್ರೀಡಾಪಟು ಮಹದೇವ್, ಗಾಯಕ ಯಶವಂತ್ ಕುಮಾರ್, ಮಹೇಶ್, ಶ್ರೀಧರ್,ಹರ್ಷಿತ್ ಎಸ್ ನಾಗೇಶ್,ಮನೋಜ್ ಮತ್ತಿತರರು ಹಾಜರಿದ್ದರು.
