ವಿಶ್ವ ನಾಯಕ ಡಾ.ಬಿ.ಆರ್. ಅಂಬೇಡ್ಕರ್- ಜಿಟಿಡಿ ಬಣ್ಣನೆ

Spread the love

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತ ಸಮುದಾಯದ ನಾಯಕರಾಗಿ ನೋಡಬಾರದು. ಅವರೊಬ್ಬ ಜಗತ್ತು ಮೆಚ್ಚುವಂತಹ ವಿಶ್ವ ನಾಯಕರು ಎಂದು ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದರು.

ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ ೧೩೪ ನೇ ಜನ್ಮ ಜಯಂತಿ ಹಾಗೂ ಸಂಘದ ನೂತನ ನಾಮಫಲಕ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ದೇಶದ ಜನರಿಗೆ ಸಮಾನತೆ ತಂದುಕೊಟ್ಟಿದ್ದರಿಂದಾಗಿ ಎಲ್ಲರಿಗೂ ಅವಕಾಶ ದೊರೆತಿದೆ ಎಂದು ಹೇಳಿದರು.

ಗ್ರಾಮದಲ್ಲಿ ಎಲ್ಲರೋ ಒಂದಾಗಿ
ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತಿ ಸಮಾರಂಭ ಆಯೋಜಿಸಿರುವುದು ಸಂತೋಷ. ಯಾರೋ ಕಿಡಿಗೇಡಿಗಳು ನಾಮಫಲಕಕ್ಕೆ ಅಪಚಾರ ಎಸಗಿದ್ದರಿಂದ ಹೊಸದಾಗಿ ನಾಮಫಲಕ ಅನಾವರಣ ಮಾಡಿ ಗಮನ ಸೆಳೆಯಲಾಗಿದೆ.
ಪ್ರೀತಿ ವಿಶ್ವಾಸ ಸದಾ ನನ್ನ ಮನದಲ್ಲಿ ಇದೆ ಎಂದು ತಿಳಿಸಿದರು.

ಅಕ್ಷರವಂತರು,ವ್ಯಾಪಾರಿಗಳಿಗೆ ಮಾತ್ರ ಮತದಾನದ ಹಕ್ಕು ಇತ್ತು.ಆದರೆ ಪ್ರತಿಯೊಬ್ಬರಿಗೂ ಮತದ ಹಕ್ಕನ್ನು ನೀಡಲು ಬಾಬಾ ಸಾಹೇಬರು ಕಾರಣಕರ್ತರಾದರು,
ಇದರಿಂದಾಗಿ ಗ್ರಾಪಂ ಸದಸ್ಯನಿಂದ ಪ್ರಧಾನಮಂತ್ರಿಗೂ ಒಂದೇ ಮತದ ಹಕ್ಕು ಹೊಂದುವಂತಾಗಿದೆ. ಪವಿತ್ರ ಮತದಾನದ ಹಕ್ಕನ್ನು ನೀಡಿದ್ದರಿಂದ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ಸಂವಿಧಾನ ವಿರೋಧ ಮಾಡುತ್ತಿದ್ದವರೇ‌ ಇಂದು ಸಂವಿಧಾನ ಪಾಲಿಸುವ ಕಾಲ ಬಂದಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಗೆ ಸಂವಿಧಾನಕ್ಕೆ ನಮಸ್ಕರಿಸಿ ಪಾದಾರ್ಪಣೆ ಮಾಡಿದಲ್ಲದೆ.ಜನ್ಮ ಜಯಂತಿ ಪ್ರಯುಕ್ತ ಸರ್ಕಾರಿ ರಜಾದಿನವನ್ನಾಗಿ‌ ಘೋಷಣೆ ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.

ದಲಿತರಿಗೆ ಸೀಮಿತವಲ್ಲ.ಜಗತ್ತಿನ ನಾಯಕರಾಗಿದ್ದಾರೆ. ಸಂವಿಧಾನ ಕೊಡದಿದ್ದರೆ ಇಂದು ಸಮಾನತೆ,ರಾಜಕೀಯ ಅವಕಾಶ ದೊರೆಯಿತು.ಇಲ್ಲದಿದ್ಷರೆ ಅನೇಕರು ರಾಜಕೀಯ ಸ್ಥಾನಮಾನದಿಂದ ವಂಚಿತರಾಗಬೇಕಿತ್ತು ಎಂದು ಜಿಟಿಡಿ ಹೇಳಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಮನೆ ಮನೆಯಲ್ಲಿ ಬೆಳಗುವ ಜ್ಯೋತಿ ಮನ ಮನದಲ್ಲಿ ಬೆಳಗಬೇಕಿದೆ ಎಂದು ತಿಳಿಸಿದರು.

ಧರ್ಮ,ಜಾತಿ ಎಲ್ಲವನ್ನೂ ಹೊರತುಪಡಿಸಿ ಇಡೀ ದೇಶದ ಜನರು ಒಂದಾಗಿ ಪಾಕಿಸ್ತಾನದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸಿಂಧೂರ ಆಪರೇಷನ್ ಯಶಸ್ವಿಯಾಗಿ ನಡೆಯಲು ಪ್ರಾರ್ಥನೆ ಮಾಡಬೇಕು ಎಂದು ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಅಂಬೇಡ್ಕರ್ ಭವನ ಮಂಜೂರು ಮಾಡಿಸಿದ್ದು,ಶೀಘ್ರದಲ್ಲೇ ಗುದ್ದಲಿ ಪೂಜೆ ನೆರವೇರಿಸಲಾಗುವುದು.

ಟಿವಿಎಸ್ ಕಾರ್ಖಾನೆ ತೆರೆಯಲು ಭೂಮಿ ನೀಡಿದ ಮಾಲೀಕರ ಕುಟುಂಬದವರಿಗೆ ಉದ್ಯೋಗ ನೀಡದೆ ಇರುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಶೀಘ್ರ ಸಮಾಲೋಚಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯರಾದ ರೂಪಾ ಲೋಕೇಶ್,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವ ರುದ್ರಮ್ಮ,ಮಾಜಿ ಅಧ್ಯಕ್ಷ ಕೃಷ್ಣಯ್ಯ,
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಚಂದ್ರಕುಮಾರ್, ಮುಖಂಡರಾದ ಮಹದೇವಯ್ಯ,ಉಮಾಪತಿ,ಮಹೇಶ್, ನಾಡಗೌಡ,ಚಂದ್ರು ಚಂದ್ರಕುಮಾರ್,
ರಂಗಸ್ವಾಮಿ, ಪ್ರಸನ್ನ ಮತ್ತಿತರರು ಹಾಜರಿದ್ದರು.