ಮೈಸೂರು: ಮೈಸೂರಿನ ಕೆಲವು ಸರ್ಕಾರಿ ಅಧಿಕಾರಿಗಳ ಆಪ್ತ ಸಹಾಯಕರು ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಸಾರ್ವಜನಿಕರ ದೂರವಾಣಿ ಕರೆಗಳಿಗೆ ಉತ್ತರಿಸದೇ ಬೇಜವಾಬ್ದಾರಿ ತೋರುತ್ತಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ದೂರಿದ್ದಾರೆ.
ಇಂತಹ ಆಪ್ತ ಸಹಾಯಕರು ಗಳಿಗೆ ಅಧಿಕಾರಿಗಳು ಸೂಕ್ತ ತಿಳುವಳಿಕೆ ನೀಡುವಂತೆ ತೇಜಸ್ವಿ ಮನವಿ ಮಾಡಿದ್ದಾರೆ
ಸಾರ್ವಜನಿಕರು ಕೆಲವು ಮಾಹಿತಿಗಳನ್ನು ತಿಳಿಯುವ ಸಲುವಾಗಿ ಅಥವಾ ಪ್ರಮುಖ ಅಧಿಕಾರಿಗಳು ಕಚೇರಿಯಲ್ಲಿ ಇರುವ ಸಮಯ ತಿಳಿಯಲು ಅಧಿಕಾರಿಗಳ ಆಪ್ತ ಸಹಾಯಕರು ಗಳಿಗೆ ದೂರವಾಣಿ ಕರೆ ಮಾಡುತ್ತಾರೆ ಆದರೆ ಆಪ್ತ ಸಹಾಯಕರು ಗಳಿಗೆ ಎಷ್ಟು ಬಾರಿ ಕರೆ ಮಾಡಿದರೂ ಉತ್ತರಿಸುವುದೆ ಇಲ್ಲ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಆರೋಪ ಮಾಡಿದ್ದಾರೆ
ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಿಗೆ ಯಾವುದೇ ವಿಷಯಗಳಿಗೂ ಪದೇ ಪದೇ ಕರೆ ಮಾಡುಲು ಆಗುವುದಿಲ್ಲ ಅದಕ್ಕಾಗಿಯೇ ಆಪ್ತ ಸಹಾಯಕರುಗಳ ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡುವುದು ಸಹಜ ಪ್ರಕ್ರಿಯೆ ಆದರೆ ಕರೆಗಳನ್ನು ಉತ್ತರಿಸದೇ ನೇರವಾಗಿ ಕಚೇರಿಯಲ್ಲಿ ಸಿಕ್ಕಾಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ.
ನಾನು ಒಬ್ಬ ಕನ್ನಡ ಹೋರಾಟಗಾರ ನಾಗಿದ್ದರೂ ಸಹ ನನ್ನ ಕರೆಗಳನ್ನು ಕೂಡ ಕೆಲ ಅಧಿಕಾರಿಗಳ ಆಪ್ತ ಸಹಾಯಕರುಗಳು ಸ್ವೀಕರಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ಅವಶ್ಯಕತೆ ಉಂಟಾದಲ್ಲಿ ಆಪ್ತ ಸಹಾಯಕರು ಗಳಿಗೆ ದೂರವಾಣಿ ಮಾಡಿರುವ ಕಾಲ್ ಡೀಟೈಲ್ಸ್ ಗಳನ್ನು ಅವರ ಮೇಲಾಧಿಕಾರಿಗಳಿಗೆ ನೀಡಿ ದೂರು ನೀಡುವುದಾಗಿ ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ
ಕೂಡಲೇ ಅಧಿಕಾರಿಗಳು ತಮ್ಮ ತಮ್ಮ ಆಪ್ತ ಸಹಾಯಕರು ಗಳಿಗೆ ತಿಳುವಳಿಕೆ ನೀಡಿ ಸಾರ್ವಜನಿಕರ ದೂರವಾಣಿ ಕರೆ ಮಾಡಿದಾಗ ಉತ್ತರಿಸಬೇಕು ಮೀಟಿಂಗ್ ಗಳು ಅಥವಾ ಕಾರ್ಯಕ್ರಮ ಗಳು ಇದ್ದಲ್ಲಿ ನಂತರದ ಸಮಯದಲ್ಲಿ ಕರೆ ಮಾಡಿ ಉತ್ತರಿಸುವಂತೆ ತೀಕ್ಷ್ಣವಾಗಿ ಆದೇಶ ನೀಡಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಮಿ ಆಗ್ರಹಿಸಿದ್ದಾರೆ.
