ಮಕ್ಕಳಿಗೆ ಪ್ರತಿದಿನ ಸರ್ವಜ್ಞ ವಚನ ಬೋಧಿಸುವಂತೆ ಯದುನಂದ ಮನವಿ

Spread the love

ಮೈಸೂರು: ಶಿಕ್ಷಕರು ಶಿಲ್ಪಿಗಳಿದ್ದಂತೆ, ಮಕ್ಕಳು ಒಂದು ಶಿಲೆಯಂತೆ,ಅವರ ಉತ್ತಮ ಜೀವನ ರೂಪಿಸಲು ಸರ್ವಜ್ಞ ವಚನ ಸಹಕಾರಿ ಎಂದು
ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಸಂಘಟನಾ ಕಾರ್ಯದರ್ಶಿ ಯದುನಂದ ಹೇಳಿದರು.

ನಗರದ ಅಕ್ಕನ ಬಳಗ ಶಾಲೆಯಲ್ಲಿ ಮಾತೃಭೂಮಿ ಸೇವಾ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ
ತ್ರಿಪದಿ ಕವಿ ಸರ್ವಜ್ಞ ಜಯಂತಿ ಅಂಗವಾಗಿ
ಶಾಲೆಗೆ ಸರ್ವಜ್ಞ ವಚನಗಳ ಪುಸ್ತಕವನ್ನು ವಿತರಿಸಿ ಅವರು ಮಾತನಾಡಿದರು.

ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಮಕ್ಕಳಿಗೆ ಭೋದಿಸಬೇಕು ಹಾಗೂ ಪತ್ರಿಕೆಗಳಲ್ಲೂ ಸಹ ದಿನಕ್ಕೊಂದು ಸರ್ವಜ್ಞ ವಚನ ಬಿತ್ತರಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಾಜ ಸೇವಕ ಯಶ್ವಂತ್ ಮಾತನಾಡಿ,ಜಗತ್ತಿನ ಮಹಾ ಜ್ಞಾನಿಗಳಲ್ಲಿ ಒಬ್ಬರಾದ ಸರ್ವಜ್ಞರು ಯಾವ ಜಾತಿ ಧರ್ಮಕ್ಕೂ ಸೀಮಿತರಾಗದೆ ವಿಶ್ವಮಾನರಾದರು.ತಮ್ಮ ತ್ರಿಪದಿಗಳ ಮೂಲಕ ನೇರವಾಗಿ ಮಾನವ ಸಂಕುಲಕ್ಕೆ ಬೇಕಾದ ಎಲ್ಲಾ ವಿಷಯಗಳನ್ನು ತಿಳಿಸಿದ್ದಾರೆ ಮತ್ತು ತ್ರಿಪದಿ ಗಳನ್ನು ಓದುವದರಿಂದ ನಮ್ಮ ಜ್ಞಾನ ಭಂಢಾರ ಹೆಚ್ಚುತ್ತದೆ ಎಂದು ತಿಳಿಸಿದರು.

ಮಾತೃಭೂಮಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಿದ್ದಮಲ್ಲೇಶ್, ನಾಗರಾಜು, ಯಶ್ವಂತ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.