ಮೈಸೂರು: ಏಪ್ರಿಲ್ 13ರಂದು
ರಾಜ್ಯದ್ಯಂತ ಏಕಕಾಲಕ್ಕೆ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ವೇದ ಬ್ರಹ್ಮಶ್ರೀ ಡಾ. ಭಾನುಪ್ರಕಾಶ್ ಅವರು ಸ್ಪರ್ಧಿಸುತ್ತಿದ್ದು ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು.
ಹಾಲಿ ಅಧ್ಯಕ್ಷರಾದ ನಿವೃತ್ತ ಅಡ್ವಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ಹಾಗೂ ಹಾಲಿ ಉಪಾಧ್ಯಕ್ಷರಾದ ಡಾ.ಭಾನುಪ್ರಕಾಶ್ ಅವರು
ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ಇದಕ್ಕೂ ಮೊದಲು ಅವರು
ಬನಶಂಕರಿಯ ಉಮಾ ಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಚಂಡೆ ವಾದ್ಯ, ವೇದ ಘೋಷ, ದೊಂದಿಗೆ ಮೆರವಣಿಗೆ ಮೂಲಕ
ತೆರಳಿ ಚುನಾವಣಾ ಅಧಿಕಾರಿಗಳಿಗೆ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾ ಪ್ರತಿನಿಧಿ 2 ಸ್ಥಾನಗಳಿಗೆ ಹಾಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಕಡಕೋಳ ಜಗದೀಶ್ ಅವರು ಸಹ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಹಾರನಹಳ್ಳಿ ಅವರು,ಕಳೆದ 30 ವರ್ಷಗಳಿಂದ ಬ್ರಾಹ್ಮಣ ಸಂಘಟನೆಯಲ್ಲಿ ನಿರತರಾಗಿ ಆರು ಬಾರಿ
ರಾಜ್ಯ ಉಪಾಧ್ಯಕ್ಷರಾಗಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಜೊತೆಗೆ ಧಾರ್ಮಿಕ ವೃತ್ತಿ ಯಲ್ಲಿ ತೊಡಗಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಹಾಗೂ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಡಾ.ಭಾನುಪ್ರಕಾಶ್ ಶರ್ಮ ಅವರು ಸದ್ಗತಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ನ ಸಕ್ರಿಯ ಕಾರ್ಯಕರ್ತರಾಗಿ ಹಿಂದೂ ಸಮಾಜದೊಂದಿಗೆ ಬೆರೆತಿದ್ದಾರೆ,13 ಬಾರಿ ಕಾವೇರಿ ಮಾತೆಗೆ ಬಾಗಿನ
ಅರ್ಪಿಸಿರುವ ದಾಖಲೆ ಇವರದಾಗಿದ್ದು ಇಂಥವರನ್ನು ಎಕೆಬಿಎಂಎಸ್ ಸದಸ್ಯರುಗಳು ಬೆಂಬಲಿಸಿ ಅತ್ಯಧಿಕ ಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಹಾಗೆಯೇ ಮೈಸೂರಿನ 2 ಸ್ಥಾನಗಳ ಪ್ರತಿನಿಧಿಯಾಗಿ ಡಿ ಟಿ ಪ್ರಕಾಶ್ ಹಾಗೂ ಕಡಕೋಳ ಜಗದೀಶ್ ಅವರನ್ನೂ ಬೆಂಬಲಿಸಬೇಕೆಂದು ಕೋರಿದರು.
ನಾಮ ಪತ್ರ ಸಲ್ಲಿಕೆ ವೇಳೆ ಅಶೋಕ್ ಹಾರನಹಳ್ಳಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ರಾಜ್ಯ ಉಪಾಧ್ಯಕ್ಷರುಗಳಾದ ರಾಘವೇಂದ್ರ ಭಟ್, ರಾಜೇಂದ್ರ ಪ್ರಸಾದ್, ಸುಧಾಕರ್, ವೆಂಕಟೇಶ್, ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಕಡಕೋಳ ಜಗದೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್.ಎನ್ ಶ್ರೀಧರ್ಮೂರ್ತಿ,ಮೈ ಕುಮಾರ್,
ಮೇಲುಕೋಟೆ ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್, ಜಯಸಿಂಹ ಶ್ರೀಧರ್, ಕೆ ಎಂ ನಿಶಾಂತ್ ಹಾಗೂ ಅಪಾರ ಬೆಂಬಲಿಗರು ಹಾಜರಿದ್ದರು.