ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾಗಿ ನೇಮಕಗೊಂಡ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್. ಎಂ.ನವೀನ್ ಕುಮಾರ್ ಅವರು ರಾಜ್ಯಾಧ್ಯಕ್ಷ ಮತ್ತು ಹಿರಿಯ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ರಾಜ್ಯಾಧ್ಯಕ್ಷರಾದ ಎಸ್.ರಘುನಾಥ್ ಹಾಗೂ ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ಅವರನ್ನು ಬೆಂಗಳೂರಿನ ಗಾಯತ್ರಿ ಭವನದಲ್ಲಿ ನವೀನ್ ಕುಮಾರ್ ಅವರು ಕೃತಜ್ಞತಾಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಸಹಕಾರ ರತ್ನ ಸಿ.ವಿ. ಪಾರ್ಥಸಾರಥಿ, ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ನಾ.ನಾಗಚಂದ್ರ, ಚಾಮುಂಡಿಪುರಂ ಭೂಮಿಕಾ ಅಸೋಸಿಯೇಟ್ಸ್ ನ ಕೆ.ಎಸ್.ಸುರೇಶ್, ಸಂಜೆ ಸಮಯ ಪತ್ರಿಕೆ ಸಂಪಾದಕರಾದ ಅನಿಲ್ ಕುಮಾರ್, ಮೈಸೂರಿನ ವಿಪ್ರಮುಖಂಡರುಗಳಾದ ಆರ್.ಎಸ್.ಸತ್ಯನಾರಾಯಣ, ಬಿ.ವಿ.ಗದಾಧರ,ಎನ್.ಎಂ.ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.