ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ರಾಜ್ಯಾಧ್ಯಕ್ಷ ಹಾಗೂ
ಉಪಾಧ್ಯಕ್ಷರಿಗೆ ಮೈಸೂರಿನ ಕೃಷ್ಣರಾಜ ಕ್ಷೇತ್ರದ ವಿಪ್ರ ಮುಖಂಡರಾದ ಎನ್.ಎಂ.ನವೀನ್ ಕುಮಾರ್ ಮತ್ತಿತರರು ಅಭಿನಂದಿಸಿದರು.
ಇಂದು ಬೆಂಗಳೂರಿನ ಗಾಯತ್ರಿ ಭವನದಲ್ಲಿ ಅಧಿಕಾರ ಸ್ವೀಕರಿಸಿದ ರಾಜ್ಯಾಧ್ಯಕ್ಷರಾದ ಎಸ್.ರಘುನಾಥ್ ಹಾಗೂ ಹಿರಿಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಅವರಿಗೆ ಭಾರೀ ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಸಿ.ವಿ.ಪಾರ್ಥಸಾರಥಿ, ಪಶ್ಚಿಮ ವಾಹಿನಿ ಶೇಷಾದ್ರಿ, ಹಿರಿಯ ವಿಪ್ರ ಮುಖಂಡರು ಹಾಗೂ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷರಾದ ವಾಸುದೇವಮೂರ್ತಿ, ಆರ್.ಎಸ್.ಸತ್ಯನಾರಾಯಣ, ಮೈಸೂರಿನ ವಿಪ್ರ ಮುಖಂಡರಾದ ಪ್ರವೀಣ್ ಕುಮಾರ್, ಗದಾಧರ್ ಮುಂತಾದವರು ಶುಭ ಕೋರಿದರು.

ಇದೇ ವೇಳೆ ಹಿರಿಯ ಆಧ್ಯಾತ್ಮಕ ಚಿಂತಕರು ಮತ್ತು ಗುರುಗಳಾದ ಪಾವಗಡ ಪ್ರಕಾಶ್ ರಾಯರು ತಂಡದವರಿಗೆ ಮುಂದಿನ ದಿನಗಳಲ್ಲಿ ಶುಭವಾಗಲಿ ಎಂದು ಆಶೀರ್ವಾದ ಮಾಡಿದರು.