ಅಹಮದಾಬಾದ್ ಮೇಘಾನಿ ನಗರ ಬಳಿ‌ 242 ಮಂದಿ ಇದ್ದ ವಿಮಾನ ಪತನ

Spread the love

ಅಹಮದಾಬಾದ್: ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು,ಪ್ರಯಾಣಿಕರ ರಕ್ಷಣಾ ಕಾರ್ಯ‌‌ ಭರದಿಂದ ಸಾಗಿದೆ.

ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 242 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಅವಘಡ ಸಂಭವಿಸಿದೆ.

ವಿಮಾನದ ಹಿಂಭಾಗ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗುಜರಾತ್​​ನ ಅಹಮದಾಬಾದ್‌ನಲ್ಲಿ ಗುರುವಾರ ಮಧ್ಯಾಹ್ನ ಏರ್ ಇಂಡಿಯಾ ವಿಮಾನ ಪತನಗೊಂಡಿದೆ,171 ಪ್ರಯಾಣಿಕರು‌ ಲಂಡನ್​ಗೆ ಪ್ರಯಾಣಿಸುತ್ತಿದ್ದರು.

ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ನಿರ್ಮಾಣ ಹಂತದ ಕಟ್ಟಡದ ಮೇಲೆ ವಿಮಾನ ಪತನಗೊಂಡಿದೆ.

ಅಹಮದಾಬಾದ್ ಹಾರ್ಸ್ ಕ್ಯಾಂಪ್ ಬಳಿ ಈ ಅಪಘಾತ ಸಂಭವಿಸಿದ್ದು,ಈ ಪ್ರದೇಶವು ಸಿವಿಲ್ ಆಸ್ಪತ್ರೆ ಬಳಿ ಇದೆ.

ಅಪಘಾತದಲ್ಲಿ ಸಾವು ನೋವು ಅಧಿಕವಾಗಿದೆ, ಗುಜರಾತ್ ಪೊಲೀಸ್ ನಿಯಂತ್ರಣ ಕೊಠಡಿ ಅಪಘಾತವನ್ನು ದೃಢಪಡಿಸಿದೆ, ವಿಮಾನವು ಮಧ್ಯಾಹ್ನ 1.30 ರ ವೇಳೆ ಅಹಮದಾಬಾದ್​​​ನ ಮೇಘಾನಿ ನಗರ ಪ್ರದೇಶದ ಮೇಲೆ ಪತನಗೊಂಡಿದೆ.

ಗುಜರಾತ್​​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ವಿಮಾನದಲ್ಲಿ ಇದ್ದರು ಎಂದು ಹೇಳಲಾಗುತ್ತಿದ್ದರೂ ಇನ್ನೂ ದೃಢಪಟ್ಟಿಲ್ಲ.

ವಿಮಾನದಲ್ಲಿ ಇಬ್ಬರು ಪೈಲಟ್​​​ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 242 ಜನರಿದ್ದರು.