ಮೈಸೂರು: ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಯಲ್ಲಿರುವ ಸೈನಿಕ ಅಕಾಡೆಮಿ ಶಾಲೆಯ ಮಡಿಕೇರಿ ನಿವಾಸಿ ದರ್ಶನ್ ವಿ ಆರ್ ಅವರು ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ಸೈನಿಕ ಅಕಾಡೆಮಿಯ ಸಂಸ್ಥಾಪಕರಾದ ಶ್ರೀಧರ್ ಸಿ ಎಂ ಅವರು ದರ್ಶನ್ ವಿ ಆರ್
ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶ್ರೀಧರ್ ಅವರು ನಮ್ಮ ಸೈನಿಕ ಅಕಾಡೆಮಿಯಲ್ಲಿ ಭಾರತಾಂಬೆಯ ಸೇವೆ ಸಲ್ಲಿಸಲು ಆಸೆ ಹೊತ್ತಿರುವು ಹಲವಾರು ಆಕಾಂಕ್ಷಿಗಳು ಊಟ, ವಸತಿ, ಲಿಖಿತ ಪರೀಕ್ಷೆಯ ತಯಾರಿ, ದೈಹಿಕ ಪರೀಕ್ಷೆಯ ತಯಾರಿಗಾಗಿ ತರಬೇತಿ ಪಡೆದು ಇದುವರೆಗೆ 359 ಆಕಾಂಕ್ಷಿಗಳು ಭಾರತೀಯ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತೀಯ ಸೇನೆಗೆ ಆಗ್ನಿವೀರರಾಗಿ ಆಯ್ಕೆ ಆಗಿರುವ ದರ್ಶನ್ ವಿ ಆರ್ ರವರಿಗೆ ನಮ್ಮ ಸೈನಿಕ ಅಕಾಡೆಮಿ ವತಿಯಿಂದ ಗೌರವಿಸಿದ್ದೇವೆ, ನಮ್ಮೆಲ್ಲರ ರಕ್ಷಣೆ ಮಾಡಲು ಸೇನೆಗೆ ಹೊರಟಿರುವ ಎಲ್ಲಾ ಯುವ ಸೈನಿಕರನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ
ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸೈನಿಕ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.