ಮೈಸೂರು: ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸೊಸೈಟಿಯ ಸದ್ಯಸರ ಜೊತೆ ಸಂವಾದ ಹಾಗೂ ಅವರ ಮಕ್ಕಳಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
8ರಿಂದ 16 ವರ್ಷದ ಸದಸ್ಯರ ಮಕ್ಕಳಿಗೆ ಭಗವದ್ಗೀತಾ ಪಠಣ ಶ್ಲೋಕ (ಯಾವುದಾದರೂ ಆರು ಶ್ಲೋಕಗಳು),
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಹಿಳೆ ಮತ್ತು ಪುರುಷ ಸದ್ಯಸರಿಗೆ ಜನಪದ/ ಭಾವಗೀತೆ/ದೇವರ ನಾಮ ಗೀತೆ ಸ್ಪರ್ಧೆ ಹಾಗೂ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಇರಲಿದೆ.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ವಿದ್ಯಾಸಂಸ್ಥೆ ಆವರಣದಲ್ಲಿ ಡಿಸೆಂಬರ್ 15ರಂದು ಮಧ್ಯಾಹ್ನ 2 ಗಂಟೆಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಸಂಘದ ಸದಸ್ಯರುಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚನ ಮಾಹಿತಿಗಾಗಿ ಮೊಬೈಲ್ 95911 70850 ಸಂಪರ್ಕಿಸಬಹುದು.